ಕೊಡಗು ಮುಸ್ಲಿಂ ಕಪ್: ಕುಂಜಿಲ ಹಾಗೂ ಕುಂಜಿಲ ನಡುವೆ ಎರಡನೇ ಸೆಮಿಫೈನಲ್ ಫೈಟ್: ಕುಂಜಿಲ ಮಣ್ಣಿಗೆ ಒಂದು ಟ್ರೋಫಿ ಫಿಕ್ಸ್:

ಕೊಡಗು ಮುಸ್ಲಿಂ ಕಪ್: ಕುಂಜಿಲ ಹಾಗೂ ಕುಂಜಿಲ ನಡುವೆ ಎರಡನೇ ಸೆಮಿಫೈನಲ್  ಫೈಟ್:  ಕುಂಜಿಲ ಮಣ್ಣಿಗೆ ಒಂದು ಟ್ರೋಫಿ ಫಿಕ್ಸ್:

ಮಡಿಕೇರಿ:ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯ ನಾಲ್ಕನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕುಂಜಿಲ ಎಫ್.ಸಿ ತಂಡವು 2-0 ಗೋಲುಗಳ ಅಂತರದಿಂದ ಒಫೀಶಿಯಲ್ ಹಳೇ ತಾಲ್ಲೂಕು ತಂಡವನ್ನು ಮಣಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.ಕುಂಜಿಲ ಎಫ್.ಸಿ ಪರವಾಗಿ ಸುಲ್ಲಿ ಹಾಗೂ ಬಾಚಿ ತಲಾ ಒಂದು ಗೋಲುಗಳಿಸಿದರು.ಕುಂಜಿಲ ತಂಡದ ಗೋಲ್ ಕೀಪರ್ ಸಿನಾನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಇದೀಗ ಎರಡನೇ ಸೆಮಿಫೈನಲ್ ಪಂದ್ಯವು ಯುನೈಟೆಡ್ ಎಫ್.ಸಿ ಕುಂಜಿಲ ಹಾಗೂ ಕುಂಜಿಲ ಎಫ್.ಸಿ ತಂಡಗಳ ನಡುವೆ ನಡೆಯಲಿದೆ.ಕೊಡಗು ಮುಸ್ಲಿಂ ಕಪ್ ಒಂದು ಪ್ರಶಸ್ತಿ ಕುಂಜಿಲ ಮಣ್ಣಿಗೆ ಖಚಿತಗೊಂಡಿದೆ.