ಗೋಲ್ಡ್ ಕಪ್ ಫುಟ್ಬಾಲ್: ಮಳೆಯ ಕಾರಣದಿಂದಾಗಿ ಸೆಮಿಫೈನಲ್ ‌ಮತ್ತು ಫೈನಲ್ ಪಂದ್ಯಗಳು ಮುಂದೂಡಿಕೆ! ಮಳೆ ನಿಂತ ನಂತರ ಮತ್ತೆ ನಡೆಯಲಿದೆ ಗೋಲ್ಡ್ ‌ಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ!

ಗೋಲ್ಡ್ ಕಪ್ ಫುಟ್ಬಾಲ್: ಮಳೆಯ ಕಾರಣದಿಂದಾಗಿ ಸೆಮಿಫೈನಲ್ ‌ಮತ್ತು ಫೈನಲ್ ಪಂದ್ಯಗಳು ಮುಂದೂಡಿಕೆ!  ಮಳೆ ನಿಂತ ನಂತರ ಮತ್ತೆ  ನಡೆಯಲಿದೆ ಗೋಲ್ಡ್ ‌ಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ!

ಸುಂಟಿಕೊಪ್ಪ: ಹವಾಮಾನ ವೈಪರಿತ್ಯ ಮತ್ತು ಕೊಡಗಿನಲ್ಲಿ ರೆಡ್ ಆಲ್‌ರ್ಟ್ ಘೋಷಣೆಯ ಹಿನ್ನಲೆಯಲ್ಲಿ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಪಂದ್ಯಾವಳಿಯ 9ನೇ ದಿನವಾದ ಶನಿವಾರದಂದು ಬಾರಿ ಮಳೆಯ ಹಿನ್ನಲೆಯಲ್ಲಿ ಸೆಮಿಫೈನಲ್ ಪಂದ್ಯಾವಳಿಗಳನ್ನು ಹಾಗೂ ನಾಳಿನ ಪೈನಲ್ ಪಂದ್ಯಾವನ್ನು ಕೂಡ ಮುಂದೂಡಲಾಗಿದೆ. 

ಶನಿವಾರದಂದು ನಿಗದಿಗೊಂಡಿದ್ದ ಸೆಮಿಫೈನಲ್ ಪಂದ್ಯಾವಳಿಗಳು ಮಳೆಯ ಕಾರಣದಿಂದ ಆಟಗಾರರು ಮೈದಾನಕ್ಕೆ ಇಳಿಯಲು ಸಾಧ್ಯವಾಗದೆ ಎಡೆಸುರಿದ ಮಳೆಯಿಂದ ಪಂದ್ಯಾವಳಿಯನ್ನು ಅಯೋಜಕರು ಮತ್ತು ದಾನಿಗಳ ನಿರ್ದೇಶನದ ಮೇರೆ ತಾತ್ಕಲಿಕವಾಗಿ ಮುಂದೂಡಲು ನಿರ್ಧರಿಸಲಾಯಿತು. 

ಈ ಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಬ್ಲೂಬಾಯ್ಸ್ ಯುವಕ ಸಂಘದ ಅಧ್ಯಕ್ಷ ಕೆ.ಎಂ.ಆಲಿಕುಟ್ಟಿ ಮಳೆಯ ದಿನಾಂಕ 16 ರಿಂದ ಆರಂಭಗೊಂಡಿದ್ದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ಕಪ್ ಪುಟ್ಬಾಲ್ ಪಂದ್ಯಾವಳಿಯ 9ನೇ ದಿನದ ಪಂದ್ಯಾಗಳು ನಿಗಧಿಗೊಂಡಿದ್ದು ಆದರಂತೆ ಮೊದಲ ಸೆಮಿಪೈನಲ್ ವಾಲ್‌ಪರಿ ಎಫ್.ಸಿ ತಮಿಳುನಾಡು ಹಾಗೂ ಮಿಡ್‌ಸಿಟಿ ಸುಂಟಿಕೊಪ್ಪ. ನಡುವೆ ನಡೆಯಬೇಕಾಗಿತ್ತು ದ್ವಿತೀಯ ಸೆಮಿಫೈನಲ್ ಪಂದ್ಯಾವಳಿ ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ತಂಡಗಳ ನಡುವೆ ನೆಡೆಯಬೇಕಿತ್ತು. ಆದರೆ ಕೊಡಗಿನಲ್ಲಿ ಮಳೆಯ ಹಿನ್ನಲೆ ರೆಡ್ ಆಲರ್ಟ್ ಘೋಷಣೆಯಾದ ಹಿನ್ನಲೆ ಪಂದ್ಯಾವಳಿಗಳನ್ನು ತಾತ್ಕಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ನಿಗಧಿಗೊಳಿಸಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಯನ್ನು ಇದೇ ತಂಡಗಳ ನಡುವೆ ಏರ್ಪಡಿಸಿ ನಿಗದಿಗೊಳಿಸಿರುವ ಬಹುಮಾನ ಮತ್ತು ಇತರ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಆಲಿಕುಟ್ಟಿ ಮಾಹಿತಿ ನೀಡಿದರು.

 ಸಂಘದ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್ ಕೋಕ ಮಾತನಾಡಿ ಸುಂಟಿಕೊಪ್ಪ ಫುಟ್ಬಾಲ್ 66ನೇ ವರ್ಷ ಬ್ಲೂಬಾಯ್ಸ್ ಸಂಘದ 39ನೇ ವರ್ಷ ಹಾಗೂ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿ 26ನೇ ವರ್ಷದ ಸೆಪೈನಲ್ ಪಂದ್ಯಾವಳಿಗಳು ಮತ್ತು ಫೈನಲ್ ಬಾರಿ ಮಳೆಯ ಹಿನ್ನೊಲೆಯಲ್ಲಿ ರದ್ದಾಗಿವೆ. 4 ತಂಡಗಳ ವ್ಯವಸ್ಥಾಪಕರು ಮತ್ತು ತಂಡದ ನಾಯಕರೊಂದಿಗೆ ಮಾತನಾಡಿ ಪಂದ್ಯಾವಳಿಯನ್ನು ಮುಂದೂಡಿದ್ದು, ಶೀಘ್ರವೇ ದಿನಾಂಕ ನಿರ್ಧರಿಸಿ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅತಿಥಿಗಳನ್ನು ಮತ್ತೆ ಸಂಪರ್ಕಿಸಿ ಆಹ್ವಾನಿಸಲಾಗುವುದೆಂದು ಪ್ರಶಾಂತ್ ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಗೌರವಧ್ಯಕ್ಷ ಟಿ.ವಿ.ಪ್ರಸನ್ನ, ನಿರ್ದೇಶಕರುಗಳಾದ ಕೆ.ಕೆ.ಪ್ರಸಾದ್ ಕುಟ್ಟಪ್ಪ, ವಾಸು, ಶಬ್ಬೀರ್, ಎಂ.ಎ.ಉಸ್ಮಾನ್ ಇದ್ದರು.