ನುಡಿದಂತೆ ನಡೆದ ಶಾಸಕರಾದ ಡಾ.ಮಂತರ್ ಗೌಡ : ನಾಳೆ ಮನೆ ಮೀನಾ ಕುಟುಂಬಕ್ಕೆ ಮನೆ ಹಸ್ತಾಂತರ

ನುಡಿದಂತೆ ನಡೆದ  ಶಾಸಕರಾದ  ಡಾ.ಮಂತರ್ ಗೌಡ : ನಾಳೆ ಮನೆ ಮೀನಾ ಕುಟುಂಬಕ್ಕೆ ಮನೆ ಹಸ್ತಾಂತರ

ಮಡಿಕೇರಿ:ಕಳೆದ ವರ್ಷ SSLC ಪರೀಕ್ಷೆ ಫಲಿತಾಂಶದ ದಿನ ದುರದೃಷ್ಟವಶಾತ್ ಹತ್ಯೆಯಾಗಿದ್ದ ವಿದ್ಯಾರ್ಥಿನಿ ಮೀನಾ ರವರ ಪೋಷಕರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ನುಡಿದಂತೆ ನಡೆದು ಮನೆ ನಿರ್ಮಿಸಿ ನಾಳೆ ದಿ. ಮೀನಾ ಪೋಷಕರಿಗೆ ಹಸ್ತಾಂತರ ಮಾಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಸರ್ವ ಕಾರ್ಯಕರ್ತರು ಮತ್ತು ಮುಖಂಡರು ,ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಂಬಂಧಿಸಿದ ಕೆಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಲಯ ಕಾಂಗ್ರೆಸ್ ಅಧ್ಯಕ್ಷರು ,ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಘಟಕ, ವಿವಿಧ ಮುಂಚೂಣಿ ಘಟಕ/ಸೆಲ್ ಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸರಕಾರಿ ನಾಮನಿರ್ದೇಷಿತ ಅಧ್ಯಕ್ಷರುಗಳು/ಸದಸ್ಯರುಗಳು, ಕಾಂಗ್ರೆಸ್ ಬೆಂಬಲಿತ ಪಂಚಾಯಿತಿಯ ಅಧ್ಯಕ್ಷರು/ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ತಪ್ಪದೇ ಹಾಜರಿರಬೇಕಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ ಸತೀಶ್ ತಿಳಿಸಿದ್ದಾರೆ.