ನೆಲ್ಲಿಹುದಿಕೇರಿ: ಖಾಯಂ ಸ್ಮಶಾನ ಜಾಗಕ್ಕಾಗಿ ಒತ್ತಾಯಿಸಿ, ಅಣುಕು ಶವ ಯಾತ್ರೆಯ ಮೂಲಕ ಪ್ರತಿಭಟನೆ

ನೆಲ್ಲಿಹುದಿಕೇರಿ: ಖಾಯಂ ಸ್ಮಶಾನ ಜಾಗಕ್ಕಾಗಿ ಒತ್ತಾಯಿಸಿ, ಅಣುಕು ಶವ ಯಾತ್ರೆಯ ಮೂಲಕ ಪ್ರತಿಭಟನೆ

ಸಿದ್ದಾಪುರ:ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸ್ಮಶಾನ ಹೋರಾಟ ಸಮಿತಿಯ ವತಿಯಿಂದ ಅಣಕು ಶವಯಾತ್ರೆಯ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.ಖಾಯಂ ಸ್ಮಶಾನ ಜಾಗಕ್ಕಾಗಿ ಒತ್ತಾಯ ಮಾಡಿ, ಒತ್ತುವರಿದಾರರಿಂದ ಕೂಡಲೇ ಜಾಗವನ್ನು ತೆರವುಗೊಳಿಸಿ, ಸ್ಮಶಾನಕ್ಕಾಗಿ ಹಸ್ತಾಂತರ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸ್ಮಶಾನ ಹೋರಾಟ ಸಮಿತಿಯ ಸಂಚಾಲಕರಾದ ಪಿ. ಆರ್. ಭರತ್, ಸುರೇಶ್, ಉದಯಕುಮಾರ್, ಪ್ರಭಾಕರ, ಚಂದ್ರ , ಮುಕುಂದ , ರವಿ, ಅನಿಲ್, ರಾಜು, ಶಿವರಾಮ, ದಾಸ್, ರಮೇಶ್, ಬೋಜಿ, ಬೇಬಿ, ಸುಶೀಲಾ, ಕುಟ್ಟನ್ , ಅಭಿ, ಇನ್ನಿತರರು ಭಾಗಿಯಾಗಿದ್ದರು.