ಮಳೆಯ ಆರ್ಭಟ: ಮೇ ತಿಂಗಳಿನಲ್ಲೇ ಕೊಡಗಿನ ಜನತೆಗೆ ಆಗಸ್ಟ್ ತಿಂಗಳು ನೆನಪಿಸಿದ ಮಳೆರಾಯ!!

ಮಳೆಯ ಆರ್ಭಟ: ಮೇ ತಿಂಗಳಿನಲ್ಲೇ ಕೊಡಗಿನ ಜನತೆಗೆ ಆಗಸ್ಟ್ ತಿಂಗಳು ನೆನಪಿಸಿದ  ಮಳೆರಾಯ!!
ಚಿಕ್ಲಿಹೊಳೆ ಡ್ಯಾಂ ಭರ್ತಿ..

ಮಡಿಕೇರಿ: ಜಿಲ್ಲೆಯಲ್ಲಿ ‌ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಜಿಲ್ಲೆಗೆ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದೆ.ಆದರೆ ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯ ಜನತೆಗೆ ಮಳೆಗಾಲದ ಅನುಭವವುಂಟಾಗಿದೆ.ಪೂರ್ವ ಮುಂಗಾರು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ.ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನತೆಗೆ ಆಗಸ್ಟ್ ಮಳೆಯ ನೆನಪಾಗಿದೆ.

ಯಾಕೆಂದರೆ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಳೆಗೆ ಇಡೀ ಜಿಲ್ಲೆ ಸಂಪೂರ್ಣ ಅಸ್ತವ್ಯಸ್ತಗೊಂಡು ಕಾವೇರಿ ನದಿ ದಡದ ಪ್ರದೇಶಗಳಲ್ಲಿ ಪ್ರವಾಹದ ಸೃಷ್ಟಿಯಾಗುತ್ತದೆ.ಇದೀಗ ಮೇ ತಿಂಗಳಿನಲ್ಲೇ ಜಿಲ್ಲೆಯ ಜನತೆಗೆ ಆಗಸ್ಟ್ ಮಳೆಯ ನೆನಪಾಗಿದ್ದು,ಮುಂದಿನ ಎರಡು ದಿನಗಳ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು,ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.