ವಿರಾಜಪೇಟೆ: ಎವೆಂಜರ್ಸ್ ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾವಳಿ: ಡಿ.ಕೋಚ್ ತಂಡ ಚಾಂಪಿಯನ್
ವಿರಾಜಪೇಟೆ:ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿರಾಜಪೇಟೆ ವತಿಯಿಂದ ಕೊಡಗು ಬಾಸ್ಕೆಟ್ ಬಾಲ್ ಲೀಗ್ 2 ನೇ ಆವೃತ್ತಿಯ ಪಂದ್ಯಾವಳಿತಯು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು. ಹೊನಲು ಬೆಳಕಿನ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ, ಗೊಣಿಕೊಪ್ಪ, ಪೊನ್ನಂಪೇಟೆ, ವಿರಾಜಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 06 ತಂಡಗಳು ಪಂದ್ಯಾಟಗಳಲ್ಲಿ ಒಟ್ಟು 60 ಮಂದಿ ಕ್ರೀಡಾಪಟುಗಳು ಭಾಗವಹಿಸಿತು. ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ನ ನುರಿತ ತೀರ್ಪುಗಾರರು ಪಂದ್ಯಾಟದಲ್ಲಿ ತಮ್ಮ ತೀರ್ಪುಗಾರಿಕೆಯನ್ನು ನೀಡಿದರು. ಒಟ್ಟು 8 ಪಂದ್ಯಾಟಗಳು ನಡೆದವು. ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ದೇಶವನ್ನು ಪ್ರತಿನಿಧಿಸಿ, ಅಂತರ್ ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿರುವ ಚೆನೈನಲ್ಲಿರುವ ಕೇಂದ್ರಿಯ ಆದಾಯ ಮತ್ತು ತೆರಿಗೆ ಇಲಾಖೆಯ ಉದ್ಯೋಗಿಯಾಗಿರುವ ಪರದಂಡ ಬೋಪಣ್ಣ ಕ್ರೀಡಾಂಗಣದಲ್ಲಿ ತನ್ನ ಕೌಶಲ್ಯವನ್ನು ತೋರಿದರು. ಅಂತಿಮ ಸುತ್ತಿಗೆ ನಾಲ್ಕು ತಂಡಗಳು ಪ್ರವೇಶ ಪಡೆದವು ಪ್ರಥಮ ಸೆಮಿಫೈನಲ್ ಪಂದ್ಯಾಟ ಬ್ಲಾಕ್ ಕೋಬ್ರಾಸ್ ವಿರಾಜಪೇಟೆ ತಂಡ ಮತ್ತು ಡಿ.ಕೋಚ್ ಗೊಣಿಕೋಪ್ಪಲು ತಂಡಗಳ ಮದ್ಯೆ ಪಂದ್ಯಾಟ ನಡೆದು 37- 54 ಅಂಕಗಳೊಂದಿಗೆ ಡಿ.ಕೋಚ್ ತಂಡ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಟೀಗಲ್ ಹೂಫ್ ಸ್ಟಾರ್ ಪೊನ್ನಂಪೇಟೆ ಮತ್ತು ಮಾರ್ಷಲ್ಸ್ ಮಡಿಕೇರಿ ತಂಡಗಳ ಮಧ್ಯೆ ನಡೆದ ರೋಚಕ ಪಂದ್ಯಾಟದಲ್ಲಿ 43-45 ಅಂಕಗಳಿಸಿ ಎರಡು ಅಂಕಗಳೊಂದಿಗೆ ಪೊನ್ನಂಪೇಟೆ ತಂಡವು ಫೈನಲ್ ಗೆ ಲಗ್ಗೆಯಿಟ್ಟತ್ತು. ವರಣನ ಅವಕೃಪೆಯಿಂದಾಗಿ ಮಧ್ಯಾಹ್ನದ ಬಳಿಕ ನಡೆದ ಎಲ್ಲಾ ಪಂದ್ಯಗಳು ಮಳೆಯಲ್ಲಿ ನಡೆಯಿತು. ಫೈನಲ್ ಪ್ರವೇಶ ಮಾಡಿದ ಎರಡು ತಂಡಗಳ ಮಾಲೀಕರು ಮತ್ತು ನಾಯಕರು ಹಾಗೂ ಆಟಗಾರರ ನಿರ್ಣಯದಂತೆ ಮಳೆಯ ಕಾರಣ ಪಂದ್ಯವನ್ನು ನೇರವಾಗಿ ಡೈರೆಕ್ಟ್ ಶೂಟ್ ಮೊರೆ ಹೋಗಲಾಯಿತು.ಡೈರೆಕ್ಟ್ ಶೂಟ್ ನಲ್ಲಿ ಡಿ.ಕೋಚ್ ತಂಡವು 4-3 ಅಂತರದಿಂದ ಪೊನ್ನಂಪೇಟೆ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿ ಗೆದ್ದಿತು.
ಉತ್ತಮ ಗುರಿಕಾರ ಪ್ರಶಸ್ತಿಯನ್ನು ಅರ್ಪಣ್, ಉತ್ತಮ ರಕ್ಷಣಾತ್ಮಕ ಆಟಗಾರ ಪ್ರಶಸ್ತಿ ಹೇಮು ಮುದ್ದಯ್ಯ, ಉತ್ತಮ ಕಲಾತ್ಮಕ ಆಟಗಾರ ಪ್ರಶಸ್ತಿಯನ್ನು ಸೋನಂ, ಮತ್ತು ಅಮೂಲ್ಯ ಆಟಗಾರರಾಗಿ ಪರದಂಡ ಬೋಪಣ್ಣ ಅವರುಗಳು ತಮ್ಮ ವೈಯುಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.
ಪಂದ್ಯಾಟದ ಅಯೋಜಕರಾದ ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿರಾಜಪೇಟೆ ನಇರ್ಷಾದ್ (ಇಚ್ಚು) ನೌಶೀಬ್ ಮತ್ತು ಸದಸ್ಯರು, ವಿವಿಧ ತಂಡಗಳ ಮಾಲೀಕರು, ಪಂದ್ಯಾಟದ ಪ್ರಮುಖ ಪ್ರಯೋಜಕರಾದ ಡಿ.ಕೋಚ್ ಸಂಸ್ಥೆಯ ಮಾಲೀಕರು ಇದ್ದರು. ಮಳೆಯನ್ನು ಲೆಕ್ಕಿಸದೇ ಕ್ರೀಡೆಗೆ ಗೌರವ ನೀಡಿ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ
What's Your Reaction?






