ವಿರಾಜಪೇಟೆ: ಜಿಲ್ಲಾ ಮಟ್ಟದ ತರ್ತೀಲ್ ಸ್ಪರ್ಧೆ
ಕಡಂಗ(Coorgdaily): ಎಸ್.ಎಸ್.ಎಫ್ ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಹೋಲಿ ಖುರ್'ಆನ್ ಪ್ರೀಮಿಯೋ ತರ್ತೀಲ್ ಕೊಡಗು ಜಿಲ್ಲಾ ಮಟ್ಟದ ಸ್ಪರ್ಧೆಯೂ ವಿರಾಜಪೇಟೆ ಅನ್ವಾರುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಿತು. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಡಿವಿಷನ್ ಗಳಿಂದ ವಿಜಯಿಗಳಾದ ಸ್ಪರ್ಧಾರ್ತಿಗಳು ಭಾಗವಹಿಸಿದ್ದರು.
ಸಮಾರೋಪ ಕಾರ್ಯಕ್ರಮವನ್ನು SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷರಾದ ಕಮರುದ್ದೀನ್ ಅನ್ವಾರಿ ಸಖಾಫಿಯವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ, ಕ್ಯಾಂಪಸ್ ಕಾರ್ಯದರ್ಶಿ ನಿಜಾಮುದ್ದೀನ್ ಮಟ್ಟಂ, ಕಾರ್ಯಕ್ರಮದ ಕುರಿತು ನುಡಿದರು.
ತೀರ್ಪುಗಾರರಾಗಿ ಝೈನುದ್ದೀನ್ ಅಝ್ಹರಿ ಮಲಪ್ಪುರಂ ಹಾಗೂ ಹಾಫಿಝ್ ತ್ವಾಹಾ ತಮೀಂ ಲತೀಫಿ ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ವಿಜಯಿಗಳಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯೂ ಬಿಹಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಸಿಸಿ ಕಾರ್ಯದರ್ಶಿ ಕಮರುದ್ದೀನ್ ಅನ್ವಾರಿ ಅಹ್ಸನಿ ಸ್ವಾಗತಿಸಿ ದಹ್ವಾ ಕನ್ವೀನರ್ ಜುನೈದ್ ಅನ್ವಾರಿ ಅಹ್ಸನಿ ವಂದಿಸಿದರು.
ವರದಿ:ನೌಫಲ್
