ಸಿದ್ದಾಪುರ: ಟರ್ಫ್ ಸೂಪರ್ ಲೀಗ್ ಕ್ರಿಕೆಟ್: ಜೈ ಭೀಮ್ ಚಾಂಪಿಯನ್, ಅಲ್ ಅಮೀನ್ ಗುಹ್ಯ ರನ್ನರ್ಸ್
ಸಿದ್ದಾಪುರ: ಸಿಟಿ ಬಾಯ್ಸ್ ಯುವ ಸಂಘದ ವತಿಯಿಂದ ನಡೆದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈ ಭೀಮ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ಮಟ್ಟದ ಆಟಗಾರರನ್ನು ಒಳಗೊಂಡ 22 ತಂಡಗಳ ನಡುವೆ ಇಲ್ಲಿಯ ಸ್ಟ್ರೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಲ್ ಅಮೀನ್ ಗುಹ್ಯ ತಂಡ ನಿಗದಿತ ನಾಲ್ಕು ಓವರ್‌ಗಳಲ್ಲಿ 34 ರನ್ ಗಳಿಸಿದರು. ತಂಡದ ಪರವಾಗಿ ಸುಜು 20 ರನ್ ಗಳಿಸಿದರು. ಜೈ ಭೀಮ್ ತಂಡದ ಪರವಾಗಿ ರಂಜೀವ್ ಎರಡು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಜೈ ಭೀಮ್ ತಂಡ 3.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ನಾಯಕ ರಾಝಿಕ್ 12 ಹಾಗೂ ರಂಜೀವ್ 19 ರನ್ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಆಲ್ ರೌಂಡರ್ ಆಟ ತೋರಿದ ರಂಜೀವ್ ಪಂದ್ಯ ಪುರುಷೋತ್ತಮ, ಡೋಮಿನೋಟರ್ಸ್ ತಂಡದ ಅಜ್ಮಲ್ ಸರಣಿ ಶ್ರೇಷ್ಠ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್, ಅಡಿಯೋಸ್ ಅಮಿಗೋಸ್ ತಂಡದ ಯಾಕೂಬ್ ಬೆಸ್ಟ್ ಬೌಲರ್, ಹುಸೈನ್ ಫ್ರೆಂಡ್ಸ್ ತಂಡದ ಬಾಸಿತ್ ಬೆಸ್ಟ್ ಕ್ಯಾಚ್, ಅಲ್ ಅಮೀನ್ ತಂಡದ ಅಝರ್ ಎಮರ್ಜಿಂಗ್ ಪ್ಲೆಯರ್, ಪವರ್ ಲೈನ್ ತಂಡದ ಚಾಚು ಲೆಜೆಂಡ್ ಪ್ಲೇಯರ್, ಪ್ಯಾರಡೈಸ್ ತಂಡದ ಬಶೀರ್ ಸೀನಿಯರ್ ಪ್ಲೆಯರ್, ಅಲ್ ಅಮೀನ್ ತಂಡದ ವಿನೋದ್ ವಿನೋದ್ ಸೂಪರ್ ಸೀನಿಯರ್ ಪ್ಲೇಯರ್, ಡೋಮಿನೋಟರ್ಸ್ ತಂಡದ ಯೂನುಸ್ ಹಾಗೂ ಸುಹೈಲ್ ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ ಬಶೀರ್, ಸಿಟಿ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಎ.ಎಸ್ ಮುಸ್ತಫ, ಗ್ರಾಮ ಪಂಚಾಯಿತಿ ಸದಸ್ಯರಾದ ಜಾಫರ್, ಹಸ್ಸನ್ ಪ್ರಮುಖರಾದ ಬೆಳ್ಳಿಯಪ್ಪ, ಕೆ.ಯು ಯೂಸುಫ್, ಕೆ.ಯು ಮುಸ್ತಫ, ಅಸ್ಕರ್, ರವಿ, ಸಿದ್ದೀಕ್ ಸೇರಿದಂತೆ ಮತ್ತಿತರರು ಇದ್ದರು.
ಪಂದ್ಯಾವಳಿಯ ತೀರ್ಪುಗಾರರಾಗಿ ನೆಲ್ಯಹುದಿಕೇರಿಯ ಮುಸ್ತಫ, ನಜೀಬ್ ಹಾಗೂ ಸ್ಕೋರರಾಗಿ ರಾಧ ಮತ್ತು ಚಿಂಜು ಕಾರ್ಯನಿರ್ವಹಿಸಿದರು.
What's Your Reaction?






