ಸ್ಟ್ರೈಕ್‌ಫೋರ್ಸ್ ಫುಟ್ಬಾಲ್ ಪ್ರೀಮಿಯರ್ ಲೀಗ್: ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಆಹ್ವಾನ

ಮಡಿಕೇರಿ: ನಲ್ವತೇಕರೆಯ ಸ್ಟ್ರೈಕ್ ಫೋರ್ಸ್ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಇದೇ ಮೇ ತಿಂಗಳ 17ರಂದು ಸಿದ್ದಾಪುರದ ಸ್ಟ್ರೈಕರ್ ಎಡ್ಜ್ ಟರ್ಫ್ ಮೈದಾನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರನ್ನು ಆಹ್ವಾನಿಸಲಾಯಿತು.ಈ ಸಂದರ್ಭ ಆಯೋಜಕರಾದ ಸಿನಾನ್ ಟಿ.ಐ, ತಮೀಮ್,ಸಿನಾನ್ ಪಿ.ಎ, ಹಾಗೂ ಅರ್ಷಾದ್ ಇದ್ದರು.
What's Your Reaction?






