ಸೆಪ್ಟೆಂಬರ್ 14ರಂದು ಸೋಮವಾರಪೇಟೆಯಲ್ಲಿ‌ 10ನೇ ವರ್ಷದ ಆಟಿ ಸಂಭ್ರಮೋತ್ಸವ

ಸೆಪ್ಟೆಂಬರ್ 14ರಂದು ಸೋಮವಾರಪೇಟೆಯಲ್ಲಿ‌ 10ನೇ ವರ್ಷದ ಆಟಿ ಸಂಭ್ರಮೋತ್ಸವ

ಸೋಮವಾರಪೇಟೆ:-ಇಲ್ಲಿನ ನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಹತ್ತನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಇಂದಿರಾಮೋನಪ್ಪ ತಿಳಿಸಿದ್ದಾರೆ.ಇದೇ ತಿಂಗಳ 14ರ ಭಾನುವಾರ ಪಟ್ಟಣದ ಮಾನಸಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಂದು ಬೆಳಿಗ್ಗೆ 8 ಗಂಟೆಗೆ ಜನಾಂಗದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ,ನಂತರ 2024 ಹಾಗೂ 25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ತಿಳಿಸಿದರು.

 ಸಮಿತಿಯ ಗೌರವ ಸಲಹೆಗಾರ ಬಿ.ಎ.ಭಾಸ್ಕರ್ ಮಾತನಾಡಿ ಬಿಲ್ಲವ ಸಮಾಜದ ಸಂಪದಾಯ,ಆಚಾರ,ವಿಚಾರಗಳನ್ನು ತಿಳಿಸುವ ಕಾರ್ಯಕ್ರಮವೇ ಆಟಿ ಸಂಭ್ರಮ ಅಂದು ಮದ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಚಂದ್ರಹಾಸ ವಹಿಸಲಿದ್ದು, ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಮಾರಂಭ ಉದ್ಘಾಟಿಸಲಿದ್ದಾರೆ. ರಾಜ್ಯ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮುಖ್ಯ ಭಾಷಣ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಡಾಕ್ಟರ್. ಮಂತರ್ ಗೌಡ,ಮಾಜಿ ಸಚಿವ ಅಪ್ಪಚ್ಚು ರಂಜನ್,ಮಂಗಳೂರು ಗೋಕರ್ಣನಾಥೇಶ್ವರ ದೇವಾಲಯದ ಪದ್ಮನಾಭ ಪೂಜಾರಿ,ಕೊಡಗು ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ಪೂಜಾರಿ,ವಿರಾಜಪೇಟೆ ಡಿ.ವೈ.ಎಸ್. ಪಿ. ಮಹೇಶ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಎ.ಎನ್.ಪದ್ಮನಾಭ ಹಾಗೂ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭ ಸಮಿತಿಯ ಸದಸ್ಯರುಗಳಾದ ಹೇಮಂತ್ ಪೂಜಾರ್,ಹಾಗೂ ರೋಹಿತ್ ಪೂಜಾರಿ ಹಾಜರಿದ್ದರು.