ಸೋಮವಾರಪೇಟೆ ತಾಲೂಕಿನಲ್ಲಿ 1152 ಬಿಪಿಎಲ್ ಕಾರ್ಡ್ ಗಳು ಅನರ್ಹ!

ಸೋಮವಾರಪೇಟೆ ತಾಲೂಕಿನಲ್ಲಿ 1152 ಬಿಪಿಎಲ್ ಕಾರ್ಡ್ ಗಳು ಅನರ್ಹ!

ಸೋಮವಾರಪೇಟೆ:ತಾಲೂಕಿನಲ್ಲಿ 1152ಬಿಪಿಎಲ್ ಕಾರ್ಡ್ ಗಳು ಅನರ್ಹಗೊಳ್ಳಲಿದೆ ಎಂದು ಆಹಾರ ಇಲಾಖೆ ನಿರೀಕ್ಷಕಿ ಯಶಸ್ವಿನಿ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆಯು ಅಧ್ಯಕ್ಷ ಜಿ.ಎಂ.ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.

 ಸರ್ಕಾರದಿಂದ ಈಗಾಗಲೇ ಪಟ್ಟಿ ಬಂದಿದ್ದು 1.2ಲಕ್ಷ ಆದಾಯ ಮೀರಿದ 992ಕಾರ್ಡುಗಳು,7ಎಕರೆ ಮೀರಿ ಕೃಷಿ ಭೂಮಿ ಹೊಂದಿದ್ದ 15,ಜಿ.ಎಸ್.ಟಿ.ಪಾವತಿದಾರರು 5,ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು 37,ಅಂತರ ರಾಜ್ಯದಲ್ಲೂ ಕಾರ್ಡ್ ಹೊಂದಿರುವ 15,ಒಂದು ವರ್ಷದಿಂದ ಪಡಿತರ ಪಡೆಯದಿರುವ 40 ಕಾರ್ಡುಗಳು ಸೇರಿದಂತೆ ಒಟ್ಟು 1152ಕಾರ್ಡುಗಳು ರದ್ದಾಗಲಿವೆ ಎಂದು ತಿಳಿಸಿದರು. ಗಂಭೀರ ಆರೋಗ್ಯ ಸಮಸ್ಯೆಯಲ್ಲಿರುವ ರೋಗಿಗಳ ಚಿಕಿತ್ಸೆಗಾಗಿ ನೀಡುವ ಕಾರ್ಡ್ಗಳನ್ನು ಮುಂದಿನದಿನಗಳಲ್ಲಿ ಸ್ಥಳೀಯ ಖಚೇರಿಯಲ್ಲಿಯೇ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ಪಡಿತರದಾರರಿಂದ ಅಕ್ರಮವಾಗಿ ಖರೀದಿಸಿದ 42 ಕ್ವಿಂಟಾಲ್ ಅಕ್ಕಿಯನ್ನು ವಾಹನ ಸಹಿತ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿ ಮೊಖದಮ್ಮೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಪಡಿತರಾದಾರರಿಗೆ ಸರ್ಕಾರ ನೀಡಲು ಉದ್ದೇಶಿಸಿರುವ ಪಡಿತರ ಕಿಟ್ ನಲ್ಲಿ ಕೊಡಗು ಜಿಲ್ಲೆಗೆ ಕಾಫಿ ಪುಡಿಯನ್ನು ಸೇರಿಸಿಕೊಡುವಂತೆ ಸರ್ಕಾರಕ್ಕೆ ಪಾತ್ರಬರೆಯಬೇಕೆಂದು ಸಮಿತಿ ಸದಸ್ಯ ವೀರೇಂದ್ರ ಗಮನ ಸೆಳೆದರು.

ಈ ಸಂದರ್ಭ ಬೃಹತ್ ಪ್ರಮಾಣದ ಕಾಳಸಂತೆಯಲ್ಲಿ ಮಾರಾಟಮಾಡಿದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಕರ್ತವ್ಯ ಪ್ರಜ್ಞೆ ತೋರಿದ ಆಹಾರ ನಿರೀಕ್ಷಕಿ ಯಶಸ್ವಿನಿಯವರನ್ನು ಸಭೆಯು ಅಭಿನಂದಿಸಿ ಸನ್ಮಾನಿಸಲಾಯಿತು. ಸೋಮವಾರಪೇಟೆ ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಗಳ ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಚರ್ಚಿಸಲುಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆಗೆ ಗೈರಾಗುತ್ತಿರುವ ಮಡಿಕೇರಿ ಕೆ.ಎಸ್.ಆರ್.ಟಿ.ಸಿ.ಡಿಪೋ ಮೆನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪಾತ್ರಬರೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಗ್ರಾಮಪಂಚಾಯ್ತಿಗಳಲ್ಲಿ ಕಂದಾಯ ವಸೂಲಾತಿ ಆಂದೋಲನ ನಡೆಸಿ ಒಂದೇ ದಿನದಲ್ಲಿ 60 ಲಕ್ಷ ರೂ ಸಂಗ್ರಹಿಸಲಾಗಿದೆ ಅಲ್ಲಿನ ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸುತ್ತೇವೆ ಎಂದರು.