26ನೇ ವರ್ಷದ ಗೋಲ್ಡ್ ಕಪ್ ಫುಟ್ಬಾಲ್: ಅಶೋಕ ಎಫ್.ಸಿ ಮೈಸೂರು ಮತ್ತು ಸಿಟಿಜನ್ ಉಪ್ಪಳ ತಂಡಕ್ಕೆ ಗೆಲುವು

ಸುಂಟಿಕೊಪ್ಪ: ಇಲ್ಲಿನ ಜಿಎಂ.ಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಮಂಗಳವಾರ ನಡೆದ ಪಂದ್ಯದಲ್ಲಿ ಅಶೋಕ ಎಫ್.ಸಿ.ಮೈಸೂರು ಮತ್ತು ಸಿಟಿಜನ್ ಎಫ್.ಸಿ ಉಪ್ಪಳ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಮೊದಲ ಪಂದ್ಯವು ಫೈಟರ್ಸ್ ಎಫ್.ಸಿ ಕೂತುಪರಂಬು ಮತ್ತು ಅಶೋಕ ಎಫ್.ಸಿ.ಮೈಸೂರು ತಂಡಗಳ ನಡುವೆ ನಡೆಯುತು.ಬಲಿಷ್ಠ ಆಟಗಾರರನ್ನು ಒಳಗೊಂಡ ಎರಡು ತಂಡಗಳು ತಮ್ಮದೇ ಆದ ಶೈಲಿಯ ಆಟದ ಮೂಲಕ ಮನರಂಜಿಸಿದವು.
ಮೈಸೂರು ತಂಡದ ಆಟಗಾರರ ಚಾಕಚಕ್ಯತೆಯ ಪಾಸ್ ಗಳ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.ಈ ನಡುವೆ ಅಶೋಕ ತಂಡದ ಆಟಗಾರ ಹೊಡೆದ ಚೆಂಡನ್ನು ಹೊರಹಾಕಲು ಪ್ರಯತ್ನಿಸಿದ ಕೂತುಪರಂಬು ತಂಡದ ಆಟಗಾರ ಶಬೀಬ್ ತಮ್ಮ ತಂಡದ ಗೋಲುಪಟ್ಟಿಯೊಳಗೆ ಹೊಡೆದು ಸ್ವಗೋಲಾಗಿ ಮಾಡಿ ಮೈಸೂರು ತಂಡಕ್ಕೆ ಮುನ್ನಡೆ ತಂದುಕೊಟ್ಟರು.2 ತಂಡಗಳ ನಡುವೆ ಸಮಬಲದ ಪೈಪೋಟಿ ನಡೆಯಿತು
2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ಪ್ರೇಕ್ಷಕರನ್ನು ಮನರಂಜಿಸಿತು.ಒಂದು ಹಂತದಲ್ಲಿ ಮೈಸೂರು ತಂಡದ ಆಟಗಾರರನ್ನು ಚೆಂಡನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೂತುಪರಂಬು ತಂಡ ಚೆಂಡಿಗಾಗಿ ಪರದಾಡುವಂತೆ ಮಾಡಿದರು. ಇದರೊಂದಿಗೆ ಮೈಸೂರು ತಂಡ ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಪಡೆದುಕೊಂಡಿತು
ದ್ಚಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಕೂತುಒರಂಬು ತಂಡ ಮೈಸೂರು ತಂಡದ ಆಟಗಾರರನ್ನು ಕಣ್ತಪ್ಪಿಸಿ ಗೋಲುಪಟ್ಟಿಗೆ ಹೊಡೆದರೂ ಗೋಲುಕೀಪರ್ ಅವರ ಆಕರ್ಷಕ ಹಿಡಿತದ ಮೂಲಕ ವಿಫಲಗೊಳಿಸಿದರು. ಈ ಹಂತದಲ್ಲಿ ಮೈಸೂರು ತಂಡ ಸಂಪೂರ್ಣವಾಗಿ ಚೆಂಡಿನಲ್ಲಿ ಹತೋಟಿ ಸಾಧಿಸಿತು. ಉತ್ತಮ ಪಾಸ್ ಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದ ಮೈಸೂರು ತಂಡ ಪಂದ್ಯದ 10 ನಿಮಿಷದಲ್ಲಿ ಭಗತ್ ಅವರು ಆಕರ್ಷಕ ಗೋಲು ಬಾರಿಸುವುದರ ಮೂಲಕ ತಂಡಕ್ಕೆ ಜಯದ ನಗೆ ಬೀರುವ ವೇಳೆಯಲ್ಲಿಯೇ ಕೂತುಪರಂಬು ತಂಡದ ಆಟಗಾರ ಅವರು ಶಿಯಾಬ್ ಅವರು 13 ನಿಮಿಷದಲ್ಲಿಆಟಗಾರರನ್ನು ಕಣ್ತಪ್ಪಿಸಿ ಆಕರ್ಷಕವಾದ ಗೋಲನ್ನು ಹೊಡೆದರು.ಇದರೊಂದಿಗೆ ಕ್ರೀಡಾಭಿಮಾನಿಗಳ ಬೊಬ್ಬೆ ಮುಗಿಲು ಮುಟ್ಟಿತು.ಕ್ಷಣಕ್ಷಣಕ್ಕೂರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಹಲವು ಅವಕಾಶಗಳಿದ್ದರೂ ಎರಡು ತಂಡಗಳು ಕೈಚೆಲ್ಲಿದ್ದರಿಂದ ಪ್ರೇಕ್ಷಕರಿಗೆ ನಿರಾಸಯಾಯಿತು.ಕೊನೆಯಲ್ಲಿ ಅಶೋಕ ಎಫ್.ಸಿ.ಮೈಸೂರು ತಂಡವು ಫೈಟರ್ಸ್ ಎಫ್ ಸಿ ಕೂತುಪರಂಬು ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ದಿನದ ಎರಡನೇ ಪಂದ್ಯವು ಸಿಟಿಜನ್ ಎಫ್.ಸಿ.ಉಪ್ಪಳ ಮತ್ತು ನೇತಾಜಿ ಎಫ್.ಸಿ ಮಂಡ್ಯ ತಂಡಗಳ ನಡುವೆ ನಡೆಯಬೇಕಾಗಿತ್ತು.ಆದರೆ ಮಂಡ್ಯ ತಂಡ ಮೈದಾನಕ್ಕೆ ಬಾರದ ಹಿನ್ನಲೆ ವಾಕ್ ಓವರ್ ಮೂಲಕ ಉಪ್ಪಳ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಫುಟ್ ಬಾಲ್ ಪಂದ್ಯವನ್ನು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹದ ಉಪಾಧ್ಯಕ್ಷ ಶ್ರೀರಾಮ್ ಚೆಂಡು ಒದೆಯುವುದರ ಮೂಲಕ ಚಾಲನೆ ನೀಡಿದರು.ಇದೇ ವೇಳೆ ಕಳೆದ 33 ವರ್ಷಗಳಿಂದ. ಸಿಟಿಜನ್ ಎಫ್.ಸಿ.ಉಪ್ಪಳ ತಂಡವನ್ನು ಸುಂಟಿಕೊಪ್ಪ ಫುಟ್ ಬಾಲ್ ಟೂರ್ನಿಗೆ ಕರೆ ತರುತ್ತಿರುವ ತಂಡದ ವ್ಯವಸ್ಥಾಪಕ ಅಶ್ರಫ್ ಅವರನ್ನು ಸಂಘದ ವತಿಯಿಂದ ಮೈದಾನದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭ ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆಯ ಮೂಲಕ ಅಭಿನಂದಿಸಿದರು.
ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ವಾಸುದೇವ, ಜಾನ್, ಹಮೀದ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ,ರಫೀಕ್ ಖಾನ್ ಇತರರು ಇದ್ದರು.
ನಾಳಿನ ಪಂದ್ಯ:
ಮದ್ಯಾಹ್ನ 3 ಗಂಟೆಗೆ ಸಿಟಿಜನ್ ಎಫ್.ಸಿ.ಉಪ್ಪಳ ಮತ್ತು ಬೆಟ್ಟಗೇರಿ ಎಫ್.ಸಿ ಬೆಟ್ಟಗೇರಿ
ಸಂಜೆ 4 ಗಂಟೆಗೆ ವಿಜಯನಗರ ಎಫ್ ಸಿ ಮೈಸೂರು ಮತ್ತು ಟಿಬೇಟಿಯನ್ ತಂಡ ಬೈಲುಕೊಪ್ಪ
What's Your Reaction?






