ಜು.27ರಂದು ವಿರಾಜಪೇಟೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 4ನೇ ವರ್ಷದ ಮಹಾಸಭೆ

ಜು.27ರಂದು ವಿರಾಜಪೇಟೆಯಲ್ಲಿ  ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 4ನೇ ವರ್ಷದ ಮಹಾಸಭೆ

ಮಡಿಕೇರಿ: ಜು.27ರಂದು ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 4ನೇ ವರ್ಷದ ಮಹಾಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ.ಪಿ.ಸೋಮಣ್ಣ ತಿಳಿಸಿದರು. ಅಂದು ಬೆಳಗ್ಗೆ ೧೦.೩೦ ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸನ್ಮಾನ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ.ಪ್ರಸಾದ್, ಮೇಜರ್ ಕುಪ್ಪಂಡ ನಂಜಪ್ಪ, ಕರ್ನಲ್ ಪುಟ್ಟ್‌ಚಂಡ ಗಣಪತಿ, ಕರ್ನಲ್ ಚಂಬಂಡ ತಿಮ್ಮಣ್ಣ, ಕುಟ್ಟಂಡ ಲವ, ಮೇಚಂದ ಚಿಟ್ಟಿಯಪ್ಪ, ಬೊಳ್ಳೆರ ರೋಶನ್ ಅವರನ್ನು ಸನ್ಮಾನಿಸಲಾಗುವುದು. ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಾಜಿ ಸೈನಿಕರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಸಂಘದ ಉಪಾಧ್ಯಕ್ಷ ಎಸ್.ಸುದೀರ್ ಮಾತನಾಡಿ, ಮಹಾಸಭೆಯಂದುಮ ಮಾಜಿ ಸೈನಿಕರ ಪಿಂಚಣಿ ಸಮಸ್ಯೆ, ಬ್ಯಾಂಕ್ ಖಾತೆ, ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ನುರಿತರಿಂದ ಮಾಹಿತಿ ನೀಡಲಾಗುವುದು. ಸನ್ಮಾನ ಕಾರ್ಯಕ್ರಮಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್, ಪಿಡಿಒ ಸಂಘದ ಅಧ್ಯಕ್ಷ ಮಣಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕರಾದ ಕರ್ತಂಡ ಚಂದನ, ಪಿ.ಎಸ್.ವಾಸು, ಡಿ.ಆರ್.ವಿಜಯ್‌ಕುಮಾರ್, ನಾಟೋಳಂಡ ಸೋಮಯ್ಯ ಉಪಸ್ಥಿತರಿದ್ದರು.