ಜಾತಿ ನಿಂದನೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ FIR ದಾಖಲಾಗಿದ್ದರು ಕೂಡ ಪೊಲೀಸ್ ಇಲಾಖೆ‌ ಆರೋಪಿಯನ್ನು ಬಂಧಿಸಿಲ್ಲ: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ.ಲೋಕೇಶ್ ಆರೋಪ

ಜಾತಿ ನಿಂದನೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ FIR ದಾಖಲಾಗಿದ್ದರು ಕೂಡ  ಪೊಲೀಸ್ ಇಲಾಖೆ‌ ಆರೋಪಿಯನ್ನು ಬಂಧಿಸಿಲ್ಲ: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ.ಲೋಕೇಶ್ ಆರೋಪ

ಮಡಿಕೇರಿ:ಜಾತಿ ನಿಂದನೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿಯ FIR ದಾಖಲಾದರು ಕೂಡ ಪೊಲೀಸ್ ಆರೋಪಿಯನ್ನು ಬಂಧಿಸಿಲ್ಲ  ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ.ಲೋಕೇಶ್ ಆರೋಪಿಸಿದರು.

ಇತ್ತೀಚೆಗೆ ಸಮಿತಿಯ ಜಿಲ್ಲಾ ಸಂಚಾಲಕರಾದ ಡಿ.ಜೆ.ಈರಪ್ಪ ಅವರು ನಾಕಲಗೂಡುದಿಂದ ಕೆಲಸಗಾರರೊಬ್ಬರನ್ನು ಕರೆತರಲು ತೆಳಿದ್ದರು. ಈ ಸಂದರ್ಭ ಕೆಲಸಗಾರ ಬರುವವರೆಗೆ ರಸ್ತೆ ಬದಿಯಲ್ಲಿ ಕಾರು ನಿಲುಗಡೆಗೊಳಿಸಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, FIR ಕೂಡ ದಾಖಲಾಗಿದೆ ಆದರೂ ಕೂಡ ಆರೋಪಿ ಬಂಧನವಾಗಿಲ್ಲ. ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಿತಿಯ ಜಿಲ್ಲಾ ಸಂಚಾಲಕರಾದ ಡಿ.ಜೆ.ಈರಪ್ಪ ಮಾತನಾಡಿ, ಹಿಂದೆಯೂ ಈ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು. ಅಂದು ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವ್ಯಕ್ತಿಯಿಂದ ಕೊಲೆ ಬೆದರಿಕೆ ಕೂಡ ಇದ್ದು, ಏನಾದರೂ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಪೊಲೀಸ್ ಇಲಾಖೆ ನೇರಹೊಣೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಶನಿವಾರಸಂತೆ ಹೋಬಳಿಯ ಸಂಚಾಲಕ ರೋಹಿತ್, ಸದಸ್ಯರಾದ ಸುದರ್ಶನ್ ಉಪಸ್ಥಿತರಿದ್ದರು.