ಅ.12 ರಂದು ಐರಿ ಜನಾಂಗದ ಒತ್ತೊರ್ಮೆ ಕೂಟ ಮತ್ತು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಅ.12 ರಂದು ಐರಿ ಜನಾಂಗದ ಒತ್ತೊರ್ಮೆ ಕೂಟ ಮತ್ತು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಮಡಿಕೇರಿ: ಐರಿ ಸಮಾಜದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಕೈಲ್​ಪೋಲ್ದ್​ ಒತ್ತೊರ್ಮೆ ಕೂಟ ಇದೇ ಅಕ್ಟೋಬರ್​ 12 ರಂದು ಭಾನುವಾರ ಅರಮೇರಿ ಗ್ರಾಮದಲ್ಲಿರುವ ಐರಿ ಸಮಾಜದ ನಿವೇಶನದಲ್ಲಿ ನಡೆಯಲಿದೆ ಎಂದು ಐರಿ ಸಮಾಜದ ಕಾರ್ಯದರ್ಶಿ ಕಾಮೆಯಂಡ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್​ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ವಾರ್ಷಿಕ ವರದಿ ಮಂಡನೆ, ಲೆಕ್ಕಪತ್ರ ಮಂಡನೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಹಾಸಭೆಯ ಬಳಿಕ ಐರಿ ಜನಾಂಗ ಬಾಧವರಿಗಾಗಿ ಕೈಲ್​ಪೋಲ್ದ್​ ಒತ್ತೊರ್ಮೆ ಕೂಟ ಆಯೋಜಿಸಲಾಗಿದ್ದು ಇದರಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಿದ್ದಾರೆ. ಜೊತೆಗೆ ಜನಾಂಗ ಬಾಂಧವರಿಗಾಗಿ ಇದೇ ಮೊದಲ ಬಾರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕೂಡ ಆಯೋಜಿಸಲಾಗಿದ್ದು ಆಕರ್ಷಕ ನಗದು ಬಹುಮಾನ ಮತ್ತು ಟ್ರೋಪಿ ನೀಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಮನರಂಜನಾ ಕಾರ್ಯಮಗಳೂ ನಡೆಯಲಿದ್ದು ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿರುತ್ತಾರೆ.