ಮತಾಂತರ ಆರೋಪ: ಗೋಣಿಕೊಪ್ಪಲಿನಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ಮತಾಂತರ ಆರೋಪ: ಗೋಣಿಕೊಪ್ಪಲಿನಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ಗೋಣಿಕೊಪ್ಪಲು:ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ, ವಿಶ್ವ ಹಿಂದೂ ಪರಿಷತ್ ವತಿಯಿಂದ ಮತಾಂತರದ ವಿರುದ್ದ ಗೋಣಿಕೊಪ್ಪಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಗೋಣಿಕೊಪ್ಪಲುವಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಿಂದ ಖಾಸಗಿ ಶಾಲೆಯ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

 ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಸಂಯೋಜಕ ಕುಕ್ಕೇರ ಅಜಿತ್ ಅವರು, ಕೊಡಗು ಜಿಲ್ಲೆಯಲ್ಲಿ ಮತಾಂತರ ಎನ್ನುವುದು ಕ್ಯಾನ್ಸರ್ ರೋಗದಂತೆ ಹರಡಿಕೊಂಡಿದ್ದು ಹಿಂದೂಗಳನ್ನು ಮತಾಂತರ ಮಾಡುವ ಷಡ್ಯಂತರ ನಡೆಯುತ್ತಿದೆ. ನಮ್ಮ ದೇಶದ ಈಶಾನ್ಯ ಪ್ರಾಂತ್ಯಗಳಾದ ಸಿಕ್ಕಿಂ, ಮಿಜೋರಂ, ನಾಗಾಲ್ಯಾಂಡ್ ಮಣಿಪುರ ಈ ಭಾಗದ ಸಮಾಜದ ಹಿಂದೂಗಳನ್ನು ಷಡ್ಯಂತ್ರದಿoದ ಮತಾಂತರ ಮಾಡಿ ಸಾಮಾನ್ಯ ಹಿಂದೂ ಆ ನೆಲದಲ್ಲಿ ಓಡಾಡಲು ಕಷ್ಟವೆನಿಸುತ್ತಿದೆ. ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ಮಿಷಿನರಿಗಳು ಸಾಕಷ್ಟು ಕೆಲಸಗಳನ್ನು ಮಾಡುತ್ತಿವೆ. ಈ ಕೆಲಸಕ್ಕಾಗಿ ವಿದೇಶದಿಂದ ಸಾಕಷ್ಟು ಹಣ ಹರಿದು ಬರುತ್ತಿದೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಬ್ರಿಟಿಷರು ಸೆರಿದಂತೆ ಹಲವರು ಭಾರತದಲ್ಲಿ ಆಡಳಿತ ನಡೆಸಿದರು ಭಾರತೀಯರು ಮತಾಂತರಕ್ಕೆ ಒಳಗಾಗಿರಲಿಲ್ಲ. ದೇಶದ ಧರ್ಮ,ಸಂಸ್ಕೃತಿಯನ್ನು ಯಾವತ್ತೂ ಕೊಲ್ಲುತ್ತೇವೆಯೋ ಅಂದು ಮತಾಂತರ ಯಶಸ್ವಿಯಾಗುತ್ತದೆ ಎಂಬುದನ್ನು ಮನಗಂಡು ದೇವಸ್ಥಾನದ ಮೇಲೆ ಆಕ್ರಮಣ ಮಾಡುವುದು ದೇವರ ಮೇಲೆ ಅಪಪ್ರಚಾರ ಮಾಡುವುದು ಹಾಗೂ ದೇವರನ್ನು ನಿಂದಿಸುವ ಷಡ್ಯಂತ್ರಗಳು ನಡೆಯುತ್ತವೆ.

 ಕ್ರೈಸ್ತ ಮಿಷಿನರಿಗಳು ಇಂದು ಮನೆಮನೆಗೆ ತೆರಳಿ ಕ್ರೈಸ್ತನನ್ನು ಆರಾಧಿಸುವಂತೆ ಪ್ರೇರೇಪಿಸುತ್ತಿವೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಭಾಗದಲ್ಲಿ ಬೇರೆಯವರಿಗೆ ಸಂಬoಧಿಸಿದ ಆಸ್ತಿಯಲ್ಲಿ ಅಕ್ರಮ ಪ್ರವೇಶ ಮಾಡಿ ಚರ್ಚಾ ಸ್ಪರ್ಧೆ ನಡೆಸುವ ಹೆಸರಿನಲ್ಲಿ ಕ್ರೈಸ್ತರ ಬೋಧನೆಯನ್ನು ಮಾಡುವುದನ್ನು, ಮಾತoತರಕ್ಕೆ ಪ್ರೆರೇಪಿಸುವುದನ್ನು ಮನಗಂಡಿದ್ದೇವೆ. ಇದನ್ನು ಪ್ರಶ್ನಿಸಿದ ಜಾಗದ ಮಾಲೀಕ ಅಯ್ಯಪ್ಪ ಅವರ ವಿರುದ್ಧ ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಾರೆ.ಈ ಸಂದರ್ಭದಲ್ಲಿ ಕ್ರೈಸ್ತ ಮಿಷಿನರಿಯ ಬೆನ್ನಿ ಎನ್ನುವ ವ್ಯಕ್ತಿಯನ್ನು ಕಾಣಬಹುದಾಗಿದೆ. ಮತಾಂತರಕ್ಕೆ ಸಂಬoಧಿಸಿದ ವಿಷಯವಲ್ಲದೆ ಚರ್ಚಾ ಸ್ಪರ್ಧೆಯಾಗಿದ್ದರೆ ಮುಖವನ್ನು ಮುಚ್ಚಿಕೊಂಡು ಪಲಾಯನ ಮಾಡುವ ಕಾರಣವೇನು ಎಂದು ಪ್ರಶ್ನೆ ಮಾಡಿದರು.ಬೆನ್ನಿ ಎನ್ನುವ ವ್ಯಕ್ತಿ ಜಾಗದ ಮಾಲೀಕರಿಗೆ ಬೆದರಿಕೆ ಹಾಕುತ್ತಾರೆ. ಆದರೂ ಪೊಲೀಸ್ ಇಲಾಖೆ ಏಕೆ ಸುಮ್ಮನೆ ಇದೆ ಎನ್ನುವುದು ಪ್ರಶ್ನೆ. ಇನ್ನು ಮುಂದೆ ಮತಾಂತರ ಮಾಡಲು ಬಿಡದೆ ಮತಾಂತರ ಮಾಡುವವರನ್ನು ಪತ್ತೆ ಹಚ್ಚಿ ಇದಕ್ಕೆ ಪ್ರಯತ್ನಿಸುತ್ತಿರುವ ಕ್ರೈಸ್ತ ಮಿಷೀನರಿಗಳ ಪರಿಚಯವಿರುವ ಬೆನ್ನಿ ಎನ್ನುವ ವ್ಯಕ್ತಿಯನ್ನು ವಿಚಾರಿಸಬೇಕು. ಕ್ರೈಸ್ತ ಮಿಷಿನರಿಗಳು ಕೊಡಗಿನಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ರಾಷ್ಟ್ರದ ಮೂಲೆ ಮೂಲೆಗಳಲ್ಲಿಯೂ ಈ ಮತಾಂತರ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಕ್ರೈಸ್ತ ಮಿಷಿನರಿಗಳು ಎಲ್ಲಾ ಕಡೆ ಫಂಡಿಂಗ್ ಮಾಡುತ್ತಿದ್ದಾರೆ. ಈ ಮಿಷಿನರಿಗಳ ಪ್ರೇರಣೆಯಿಂದ ಹಲವಾರು ಜನರು ಮತಾಂತರಗೊoಡು ಭಾನುವಾರದಂದು ಚರ್ಚಿನ ಮುಂದೆ ಪ್ರಾರ್ಥನೆ ಸಲ್ಲಿಸುವುದನ್ನು ನೋಡಬಹುದು. ಮತಾಂತರ ಪ್ರಕ್ರಿಯೆಯನ್ನು ಹಿಂದೆಯೇ ತಡೆದಿದ್ದರೆ ಇಂದು ಹಲವಾರು ಕಾರ್ಯಕರ್ತರು ನಮ್ಮ ಜೊತೆಗಿರುತ್ತಿದ್ದರು. ಇಲಾಖೆಯವರು ಈ ಪ್ರಕರಣವನ್ನು ವಿಶೇಷವಾಗಿ ತನಿಖೆಗೆ ಒಳಪಡಿಸಬೇಕು.

 ಹಿಂದುಳಿದ ವರ್ಗದ ಹಲವಾರು ಜನರಿಗೆ ಜಾತಿ ದೃಡೀಕರಣ ಪತ್ರ ಮಾತ್ರ ಬೇಕಾಗಿದೆ ಧರ್ಮ ಬೇಕಾಗಿಲ್ಲ. ಸನಾತನ ಧರ್ಮ ಈ ಪ್ರಕೃತಿ ಈ ಭೂಮಿ, ನಂಬಿಕೆಯೇ ದೇವರು. ಅವರ ಆಚರಣೆಗೆ ನಮ್ಮ ತಕರಾರಿಲ್ಲ ಮತಾಂತರ ಮಾಡುವುದಕ್ಕೆ ನಮ್ಮ ತಕರಾರಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಬೆನ್ನಿ ಹಾಗೂ ಶಾಂತಿ ಅಚ್ಚಪ್ಪನವರ ಮೇಲೆ ಬಲವಾದ ಅನುಮಾನವಿದೆ. ಈ ಕುರಿತು ತೀವ್ರವಾದ ವಿಚಾರಣೆ ನಡೆಸಬೇಕು. ಕಮಿಷನರಿಗಳು ಬಡವರನ್ನು ಗುರುತಿಸಿ ಅವರಿಗೆ ಶೈಕ್ಷಣಿಕವಾಗಿ ಹಾಗೂ ಹಣಕಾಸಿನ ವಿಚಾರದಲ್ಲಿ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವರ ದೌರ್ಬಲ್ಯವನ್ನು ಅವರ ಮತಾಂತರದ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಹೆಸರು ಬದಲಾವಣೆ ಮಾಡಿಕೊಂಡು ತಮ್ಮನ್ನು ತಾವು ಕ್ರೈಸ್ತ ಮಿಷಿನರಿಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಜನಾಂಗದವರು ಮತಾಂತರಗೊoಡು ಹಿರಿಯ ತಲೆಮಾರಿನವರಿಗೆ ಅವಮಾನವನ್ನುಂಟು ಮಾಡುತ್ತಿದ್ದಾರೆ. ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ಕುರಿತು ಪೊಲೀಸ್ ಇಲಾಖೆಯವರು ತೀವ್ರವಾದ ತನಿಖೆ ಕೈಗೊಳ್ಳಬೇಕೆಂದರು.

 ಮತಾಂತರ ಎಸಗುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಅವರು 31/08/2025 ರಂದು ಕಾರ್ಯಕ್ರಮಕ್ಕೆ ಸಂಬoಧಪಟ್ಟoತೆ ಬಂದಿರುವ ಎರಡು ದೂರನ್ನು ಯಥಾವತ್ತಾಗಿ ಪಡೆದುಕೊಂಡು ಕಾನೂನು ಕ್ರಮದಂತೆ ವಿಚಾರಣೆ ನಡೆಸುತ್ತಿದ್ದೇವೆ,ಯಾರ ಮೇಲೆಯೂ ಪ್ರಕರಣ ದಾಖಲಾಗಿರುವುದಿಲ್ಲ ಎರಡು ಕಡೆಯವರ ದೂರು ವಿಚಾರಣೆ ಹಂತದಲ್ಲಿದ್ದು ತನಿಖೆ ನಡೆಯುತ್ತಿದೆ. ಅಯ್ಯಪ್ಪ ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಇಂದು ನೀಡಿರುವ ಮೊಕ್ಕದಮೆಯನ್ನು ದಾಖಲಿಸಿಕೊಂಡು ತನಿಖೆಯಲ್ಲಿ ಅಳವಡಿಸಿಕೊಂಡು ಮೇಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ನಡೆದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.

.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಿ. ಕೆ ಬೋಪಣ್ಣ, ನಗರ ಅಧ್ಯಕ್ಷ ಎನ್. ಆರ್. ಅಮೃತ್ ರಾಜ್, ಕಾರ್ಯದರ್ಶಿ ಕೆ. ವಿ ಸುರೇಶ್ ರೈ, ಪೋನ್ನಂಪೇಟೆ ತಾಲ್ಲೂಕು ಉಪಾಧ್ಯಕ್ಷ ಎಂ. ಎಸ್ ಸುಬ್ರಮಣಿ, ಮಾಚಿಮಾಡ ಸುಬಿನ್ ಗಣಪತಿ, ಚೆಪ್ಪುಡಿರ ರಾಕೇಶ್ ದೇವಯ್ಯ , ಗುಮ್ಮಟ್ಟಿರ ಕಿಲನ್ ಗಣಪತಿ, ನೆಲ್ಲಿರ ಚಲನ್, ಪಂದ್ಯoಡ ಹರೀಶ್, ಪುದಿಯೊಕ್ಕಡ ರಮೇಶ್ ಸೇರಿದಂತೆ ಮತ್ತಿತರರು ಇದ್ದರು. ವಿಶ್ವ ಹಿಂದೂ ಪರಿಷತ್ ಪೋನ್ನಂಪೇಟೆ ತಾಲ್ಲೂಕು ಉಪಾಧ್ಯಕ್ಷ ಎಂ. ಎಸ್ ಸುಬ್ರಮಣಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ: ಚಂಪಾ ಗಗನ ಪೊನ್ನಂಪೇಟೆ