ಆಲೂರುಸಿದ್ದಾಪುರ ಕೃಷಿ ಪತ್ತಿನ ಸಂಘಕ್ಕೆ 28.85 ಲಕ್ಷ ನಿವ್ವಳ ಲಾಭ

ಶನಿವಾರಸಂತೆ:-‘ಸಹಕಾರಿ ಸದಸ್ಯರು ಸಕಾಲದಲ್ಲಿ ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸುವುದು ಮತ್ತು ಸಂಘದ ಬೆಳವಣಿಗೆಗೆ ಸಹಕಾರವುದ್ದರಿಂದ ಸಂಘವು ಲಾಭಗಳಿಸಲು ಸಾಧ್ಯವಾಗುತ್ತದೆ’ ಎಂದು ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್ ಅಭಿಪ್ರಾಯ ಪಟ್ಟರು, ಅವರು ಸದರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಬೆಳವಣಿಗೆಯಲ್ಲಿ ಸಹಕಾರಿ ಸದಸ್ಯರ ಸಹಕಾರ ಪ್ರಮುಖವಾದದ್ದು ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸಿ ಸಹಕರಿಸಬೇಕು ಮತ್ತು ಸಂಘದಲ್ಲಿ ಕೃಷಿ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಸಂಘದ ನಿಯಮದಂತೆ ತಮ್ಮ ಜಮೀನಿನ ಪಹಣೆ ಪತ್ರದಲ್ಲಿ ವ್ಯತ್ಯಸವಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಸಂಘದಲ್ಲಿ ಸಾಲ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸದರಿ ಸಂಘವು ಈ ಸಾಲಿನಲ್ಲಿ ೨೮ ಲಕ್ಷದ ೮೫ ಸಾವಿರದ ೧೬೪ ರು ನಷ್ಟು ನಿವ್ವಳ ಲಾಭಗಳಿಸಿದೆ ಈ ಮೂಲಕ ಕಳೆದ ಸಾಲಿಗಿಂತ ಹೆಚ್ಚಿನ ಲಾಭಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು. ಸಂ
ಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಲೀಲಾಕುಮಾರ್ ಸದರಿ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸುತ್ತಾ-ಸದರಿ ಸಂಘದಲ್ಲಿ ೨೬೯೫ ಮಂದಿ ಸದಸ್ಯರಿದ್ದು ಸದಸ್ಯರ ‘ಎ’ ತರಗತಿಯ ಪಾಲು ಹಣ ೧ ಕೋಟಿ ೭೧ ಲಕ್ಷದ ೯ ಸಾವಿರದ ೫೭೫ ರು ಇರುತ್ತದೆ ಸಂಘವು ೨೦೨೪-೨೫ನೇ ಸಾಲಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ ೧೩ ಕೋಟಿ ೧೧ ಲಕ್ಷ ೧೯ ಸಾವಿರದ ೮೬೨ ರೂ ಸಾಲ ಪಡೆಯಲಾಗಿದ್ದು ಈ ಮೂಲಕ ಸಂಘದ ಸದಸ್ಯರಿಗೆ ಈ ಸಾಲಿನಲ್ಲಿ ೧೩ ಕೋಟಿ ೭೦ ಲಕ್ಷದ ೧೦ ಸಾವಿರದ ೮೦೫ ರೂ ಕೆ.ಸಿ.ಸಿ ಸಾಲವನ್ನು ವಿತರಿಸಿದೆ ಎಂದು ಹೇಳಿದರು.ಸಂಘದಲ್ಲಿ ೯೩ ಸ್ವ-ಸಹಾಯ ಸಂಘಗಳಿದ್ದು ಈ ಪೈಕಿ ೧೧ ಗುಂಪುಗಳಿಗೆ ೪೬ ಲಕ್ಷದ ೨೦ ಸಾವಿರ ರು ಸಾಲ ಪಾವತಿಸಿದ್ದು ಈ ಮೂಲಕ ಶೇನೂರರಷ್ಟು ಸಾಲ ವಸೂಲಾತಿಯಾಗಿದೆ ಎಂದ ಅವರು ಸಂಘವು ೨೦೨೪-೨೫ನೇ ಸಾಲಿನಲ್ಲಿ ೧ ಕೋಟಿ ೩೬ ಲಕ್ಷದ ೪೧ ಸಾವಿರದ ೫೧೫ ರು ನಷ್ಟು ವ್ಯಾಪಾರ ವಹಿವಾಟು ನಡೆಸಿ ಈ ಮೂಲಕವಾಗಿ ೬ ಲಕ್ಷದ ೮೪ ಸಾವಿರದ ೭೧೫ ರೂ ಗಳ ವ್ಯಾಪಾರ ಲಾಭವನ್ನುಗಳಿಸಿದೆ ಎಂದು ಹೇಳಿದರು. ಮಹಾಸಭೆಯಲ್ಲಿ ನಡೆದ ಚರ್ಚೆಗಳು-ಸಂಘದ ಸದಸ್ಯರಿಗೆ ಕೃಷಿ ಸಾಲ ಸೇರಿದಂತೆ ವಾಹನ ಸಾಲ ಮತ್ತು ಇತರೆ ಕೃಷಿಯೇತರ ಸಾಲಗಳು ಒಳಗೊಂಡಂತೆ ೨೫ ಲಕ್ಷದ ವರೆಗೆ ಸಾಲವನ್ನು ಏರಿಕೆ ಮಾಡುವಂತೆೆ ಒತ್ತಾಯಿಸಲಾಯಿತು.
ವಾರ್ಷಿಕ ಮಹಾಸಭೆಗೆ ಸಹಕಾರಿ ಸಂಘದ ಸದಸ್ಯರು ಬಾರದೆ ಬೇರೆಯೊಬ್ಬರ ಮೂಲಕ ಸಹಕಾರಿ ಸದಸ್ಯರಿಗೆ ನೀಡುವ ಭತ್ಯ ಚೀಟಿಯನ್ನು ಕೊಟ್ಟುಕಳುಹಿಸಿ ಭತ್ಯ ಹಣವನ್ನು ಪಡೆದುಕೊಳ್ಳುತ್ತಾರೆ ಇದು ಒಳೆಯ ಬೆಳವಣಿಗೆಯಲ್ಲ ಇನ್ನು ಮುಂದೆ ಭತ್ಯೆ ಪಡೆಯವ ಸಂಘದ ಸದಸ್ಯರೆ ಸ್ವತ: ಮಹಾಸಭೆಗೆ ಬಂದು ಭತ್ಯೆ ಹಣವನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿ ನಿರ್ಣಹಿಸಲಾಯಿತು. ಮಹಾಸಭೆಯಲ್ಲಿ ಸಂಘದ ಬೆಳವಣಿಗೆ ಮತ್ತು ಸಹಕಾರಿ ಸದಸ್ಯರಿಗೆ ಉಪಯೋಗಕ್ಕೆ ಪೂರಕವಾಗಿ ಚರ್ಚಿಸಲಾಯಿತು.
ಸಂಘದ ಹಿರಿಯ ಸಹಕಾರಿ ಸದಸ್ಯರಾದ ಸಿ.ಕೆ.ಚಂದ್ರಶೇಖರ್, ಎಚ್.ಎಸ್.ಪ್ರೇಮ್‌ನಾಥ್, ರವಿ, ಗಣಗೂರು ಚಂದ್ರಶೇಖರ್ ಮುಂತಾದವರು ಸಭೆಯಲ್ಲಿ ಚರ್ಚಿಸಿದರು ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ.ಹೊನ್ನಪ್ಪ ಮತ್ತು ಆಡಳಿತ ಮಂಡಳಿಯ ಸರ್ವ ನಿರ್ದೇಶಕರು, ಶನಿವಾರಸಂತೆ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್, ಕೆಡಿಸಿಸಿ ಬ್ಯಾಂಕ್ ಪರ ಮೇಲ್ವಿಚಾರಕ ಬಿ.ಜೆ.ಇಂದ್ರೇಶ್ ಸಂಘದ ಲೆಕ್ಕಾಧಿಕಾರಿ ಕೆ.ಡಿ.ಚಂದ್ರಮತಿ ಹಾಗೂ ಸಿಬ್ಬಂದಿ ಹಾಜರಿದ್ದರು.