ಅಮ್ಮತ್ತಿ:ಜೀವನದಲ್ಲಿ ಜಿಗುಪ್ಸೆ ಯುವಕ ಆತ್ಮಹತ್ಯೆಗೆ ಶರಣು

ಅಮ್ಮತ್ತಿ:ಜೀವನದಲ್ಲಿ ಜಿಗುಪ್ಸೆ ಯುವಕ ಆತ್ಮಹತ್ಯೆಗೆ ಶರಣು
ಪರಮೇಶ್

ವಿರಾಜಪೇಟೆ,ಡಿ11: ಜೀವನದಲ್ಲಿ ಜಿಗುಪ್ಸೆಯಿಂದಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮ್ಮತ್ತಿ ಕಾರ್ಮಾಡುವಿನಲ್ಲಿ ನಡೆದಿದೆ.

 ಕುಶಾಲನಗರ ಗೊಂದಿಬಸವನಹಳ್ಳಿ ನಿವಾಸಿ, ಪ್ರಸ್ತುತ ಅಮ್ಮತ್ತಿ ಕಾರ್ಮಾಡು, ಚೌಡೇಶ್ವರಿ ನಗರದಲ್ಲಿ ವಾಸಿಸುತ್ತಿರುವ ಪ್ರಕಾಶ್ ಎಂಬುವವರ ಪುತ್ರ ಪರಮೇಶ್ (30) ನೇಣಿಗೆ ಶರಣಾದ ವ್ಯಕ್ತಿ.

ಮೃತ ವ್ಯಕ್ತಿ ಪರಮೇಶ್ ಕೂಲಿ ಕಾರ್ಮಿಕನಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ವಿರಾಜಪೇಟೆ ನಿವಾಸಿ ತಶ್ಮ ಹೆಚ್.ಎನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಪತಿ ಪತ್ನಿಗೆ 4 ವರ್ಷದ ಗಂಡು ಮಗು ಇದ್ದು, ತಾ. 11/12/2025 ರಂದು ಬೆಳಿಗ್ಗೆ ಪತ್ನಿ ತಶ್ಮ, ಕಾರ್ಯನಿಮಿತ್ತ ಮನೆಯಿಂದ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದರು.

 ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸುಮಾರು ಬೆಳಗ್ಗೆ 11ರ ಸಮಯದಲ್ಲಿ ಪರಮೇಶ್ ಕೋಣೆಯೊಂದರ ಉತ್ತರಕ್ಕೆ ಪತ್ನಿಯ ಬಟ್ಟೆ ವೇಲ್ ನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

 ವಿರಾಜಪೇಟೆ ನಗರದಿಂದ ಮನೆಗೆ ಆಗಮಿಸಿದ ಪತ್ನಿ ತಶ್ಮ ನೋಡಿದಲ್ಲಿ ಪತಿ ಅತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತನ ಪತ್ನಿ ತಶ್ಮ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ಬಿ.ಎನ್.ಎಸ್.ಎಸ್ 194 ರ ಆನ್ವಯ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ: ಕಿಶೋರ್ ಕುಮಾರ್ ಶೆಟ್ಟಿ