ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದವ ಅಂದರ್

ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದವ ಅಂದರ್

ಪೊನ್ನಂಪೇಟೆ: ತಾಲೂಕಿನ ಬೆಸಗೂರು ಗ್ರಾಮದಲ್ಲಿ ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅರಮಣಮಾಡ ಬಾಗು (56) ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಅರಮಣಮಾಡ ಸಚಿನ್ (42) ನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ಹಿಂದಿನಿಂದಲೂ ಪರಸ್ಪರ ವೈಶ್ಯಮ್ಯವಿದ್ದು ಇಂದು ಗದ್ದೆಗೆ ತೆರಳುವ ದಾರಿ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಏರ್ಪಟ್ಟು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.