ಮಾರುಕಟ್ಟೆ ಬಗ್ಗೆ ಹೊರ ರಾಜ್ಯಗಳಲ್ಲಿ ಅರ್ಜಿ ಆಹ್ವಾನ

ಮಡಿಕೇರಿ -ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ(ಲಿಡ್ಕರ್) ವತಿಯಿಂದ 2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ಮಾದಿಗ, ಸಮಗಾರ, ಡೋರ, ಮೋಜಿ, ಮೋಜಿಗಾರ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಫಲಾಪೇಕ್ಷಿಗಳಿಗೆ ವಿವಿಧ ಯೋಜನೆಗಳಾದ ಕಿರು ನೇರಸಾಲ, ವಸತಿ ಕಾರ್ಯಗಾರ ಯೋಜನೆ, ವಿವಿಧ ವಿನ್ಯಾಶಗಳ, ಮಾರುಕಟ್ಟೆ ಬಗ್ಗೆ ಹೊರ ರಾಜ್ಯಗಳಲ್ಲಿ ಅಧ್ಯಯನ ಮಾಡಲು ಸೇವಾಸಿಂಧು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್, 09 ರೊಳಗೆ https://sevasindhu.karnataka.gov.in ಹಾಗೂ https//sevasindhuservices.karnataka.gov.in ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರು, ಲಿಡ್ಕರ್ ಕೊಡಗು ಮೊಬೈಲ್ ಸಂಖ್ಯೆ 9741833307, 7795603247 ನ್ನು ಸಂಪರ್ಕಿಸಬಹುದು ಎಂದು ಕುಶಾಲನಗರ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.