ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಿ.ಐ.ಟಿ.ಯು ಜಿಲ್ಲಾ ಘಟಕ ಬೆಂಬಲ

ವಿರಾಜಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿರುವ ಕೇಂದ್ರ ಕಾರ್ಮಿಕ ಸಂಘಟಟನೆಗಳ ಸಮಿತಿಯು ತಾ.09 ರಂದು ನಡೆಯುವ ಮುಷ್ಕರಕ್ಕೆ ಸಿ.ಐ.ಟಿ.ಯು ಜಿಲ್ಲಾ ಘಟಕ ತನ್ನ ಬೆಂಬಲ ಸೂಚಿಸಿದೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕೊಡಗು ಜಿಲ್ಲಾ ಘಟಕದ ವತಯಿಂದ ವಿರಾಜಪೇಟೆ ನಗರದ ಕಛೇರಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಾ.09 ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಐ.ಟಿ.ಯು ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ ಸಾಬು, ಕೇಂದ್ರ ಸರ್ಕಾರವು ಕಾರ್ಮಿಕ ನೀತಿಗಳಿಗೆ ವಿರುದ್ದವಾಗಿ ಕಾನೂನುಗಳನ್ನು ಜಾರಿಗೆ ತಂದಿದೆ. ತಾ. 09 ರಂದು ನಡೆಯುವ ಸಾರ್ವತ್ರಿಕ ಮುಷ್ಕರ ಕ್ಕೆ ರಾಜ್ಯದಾದ್ಯಂತ ಮುಷ್ಕರಕ್ಕೆ ನಮ್ಮ ಬೆಂಬಲವಿದ್ದು ಸುಮಾರು 11 ಕಾರ್ಮಿಕ ಸಂಘಟನೆಗಳು ಬೆಂಬಲವನ್ನು ವ್ಯಕ್ತಪಡಿಸಿದೆ.
ಬೆಲೆ ಏರಿಕೆಯಿಂದಾಗಿ ಕಾರ್ಮಿಕರ ಬದುಕು ಶೋಚನಿಯ ಸ್ಥಿತಿಗೆ ತಲುಪಿದೆ. ಸುಮಾರು 70 ವರ್ಷಗಳಿಂದ ಕಾರ್ಮಿಕರಿಗೆ ನಿಗದಿಗೊಳಿಸಿರುವ ದುಡಿಮೆಯ ಸಮಯ 08 ಗಂಟೆ,ಆದರೆ ಕೇಂದ್ರ ಸರ್ಕಾರವು 8 ಗಂಟೆ ಬದಲು 12 ಗಂಟೆ ದುಡಿಯುವಂತೆ ಕಾನೂನು ಜಾರಿಗೆ ತಂದಿದೆ. ಇದರಿಂದ ದೇಶದಲ್ಲಿ ಕೆಲವು ರಾಜ್ಯಗಳು ಕಾನೂನು ಜಾರಿಗೆ ತಂದಿದೆ. ಕಾರ್ಮಿಕರ ಶ್ರೇಯಸ್ಸು ಕಾಯುವ ಬದಲು ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ತರುವಂತಿದೆ. ದುಡಿಮೆಯ ಹಣವು ಅಭಿವೃದ್ದಿ ಹೆಸರಿನಲ್ಲಿ ಕಾರ್ಪೋರೇಟ್ ಸಂಸ್ಥೆಯ ಮಡಿಲಿಗೆ ಸೇರುತಿದೆ ಎಂದು ಆರೋಪಿಸಿದರು. ತಾ.09 ರಂದು ನಡೆಯುವ ಬೃಹತ್ ಮಟ್ಟದ ಹೋರಾಟಕ್ಕೆ ಸಿ.ಐ.ಟಿ.ಯು ಸಂಘಟನೆಯ ಅಡಿಯಲ್ಲಿ ಬರುವ 09 ಸಂಘಟನೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗು ಇತರ ದಿನಗೂಲಿ ಕಾರ್ಮಿಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಿ.ಐ.ಟಿ.ಯು ನ ಕೊಡಗು ಜಿಲ್ಲಾ ಘಟಕದ ಅದ್ಯಕ್ಷರಾದ ಪಿ.ಆರ್. ಭರತ್ ಅವರು ಮಾತನಾಡಿ , ಕೇಂದ್ರ ಸರ್ಕಾರವು ಸುಮಾರು 29 ಕಾರ್ಮಿಕ ನೀತಿಗಳನು ತಿದ್ದುಪಡಿ ಮಾಡಲು ಹೊರಟಿದೆ. ಕಾರ್ಮಿಕ ನೀತಿಗಳ ವಿರುದ್ಧವಾಗಿ ಕಾನೂನು ಜಾರಿಗೆ ತಂದಿದೆ. ಕಾರ್ಮಿಕರ 22 ಬೇಡಿಕೆಗಳನ್ನು ಮುಂದಿಟ್ಟು ನಮ್ಮ ಹೋರಾಟ ಮಾಡುತಿದ್ದೇವೆ. ಪ್ರತಿಭಟನೆಯ ಸಂದರ್ಭದಲ್ಲಿ ಸಂಘಟನೆಗಳ ವತಿಯಿಂದ ತಾಲೂಕು ತಹಶೀಲ್ದರ್ ಅವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಐ.ಟಿ.ಯು ಜಿಲ್ಲಾ ಸಮಿತಿಯ ಖಜಾಂಜಿಗಳಾದ ಎನ್.ಡಿ. ಕುಟ್ಟಪ್ಪ, ಪದಾಧಿಕಾರಿಗಳಾದ ಕೆ.ಕೆ. ಹರಿದಾಸ್ ಅವರು ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ
What's Your Reaction?






