ಶನಿವಾರಸಂತೆ;ಕಾಡು ಪ್ರಾಣಿ ಬೇಟೆ,ಆರೋಪಿಯ ಬಂಧನ

Mar 12, 2026 - 22:00
 0  2.3k
ಶನಿವಾರಸಂತೆ;ಕಾಡು ಪ್ರಾಣಿ ಬೇಟೆ,ಆರೋಪಿಯ ಬಂಧನ

ಶನಿವಾರಸಂತೆ;ವಲಯ ಶಾಖೆಯ ಜಾಗೇನಹಳ್ಳಿ ಗ್ರಾಮದ D.S ಸುರೇಶ್ ಅವರಿಗೆ ಸೇರಿರುವ ಮನೆಯಲ್ಲಿ ಅಕ್ರಮವಾಗಿ ಕಾಡು ಪ್ರಾಣಿಯನ್ನು ಬೇಟೆಯಾಡಿ ಮಾಂಸವನ್ನು ತಯಾರಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ದಾಳಿಮಾಡಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಕಾಡು ಪ್ರಾಣಿ ಮಾಂಸ ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.ಸುರೇಶ್ ಡಿ.ಎಸ್ ಬಂಧಿತ ಆರೋಪಿ. ಇಬ್ಬರು ಆರೋಪಿಗಳು‌‌ ತಲೆ ಮರೆಸಿಕೊಂಡಿದ್ದು,ಪ್ರಕರಣ ದಾಖಲಾಗಿದೆ.

ಮಡಿಕೇರಿ ವಿಭಾಗದ DCF ಹಾಗೂ ಸೋಮವಾರಪೇಟೆ ಉಪವಿಭಾಗದ ACF ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಪೂಜಶ್ರೀ ಅವರ ನೇತೃತ್ವದಲ್ಲಿ DRFO ವಿಕ್ರಮ್. ಜಿ ಮತ್ತು ಗಸ್ತು ಅರಣ್ಯ ಪಾಲಕರಾದ ಭರ್ಮಪ್ಪ,ಕರೇಪ್ಪ ಪೂಜಾರಿ, ಮತ್ತು ಸಿಬ್ಬಂದಿಗಳಾದ ಹರೀಶ್,ಆನಂದ್,ನಾಗೇಶ್,ಗೋಪಿ,ಉಮೇಶ್,ಚಂದನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 1
Sad Sad 0
Wow Wow 0