ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ - ಶಿಕ್ಷಕವಗ೯ದಿಂದ ವೈವಿಧ್ಯಮಯ ಕಾಯ೯ಕ್ರಮ

ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ - ಶಿಕ್ಷಕವಗ೯ದಿಂದ ವೈವಿಧ್ಯಮಯ ಕಾಯ೯ಕ್ರಮ

ಮಡಿಕೇರಿ ನ.15: ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯು ಶಿಕ್ಷಕರ ಸಂಭ್ರಮದಿಂದ ಜರುಗಿತು. . ಶಿಕ್ಷಕರೇ ಸಂಪೂರ್ಣ ಕಾರ್ಯಕ್ರಮವನ್ನು ನಿವ೯ಹಿಸಿ , ಮಕ್ಕಳಿಗೆ ಹಬ್ಬದ ಸಂಭ್ರಮವನ್ನು ನೆನಪಿಸಿದರು.

 ಕಲಾ, ಕ್ರೀಡೆ, ಹಾಸ್ಯ ಮತ್ತು ಸಂಭ್ರಮಗಳ ಸಂಯೋಜನೆಯಾಗಿ ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ವಿದ್ಯಾಥಿ೯ಗಳಿಗೂ ಶಿಕ್ಷಕರಿಗೂ ಸ್ಮರಣೀಯ ಅನುಭವ ನೀಡಿತ್ತು.

ಶಾಲಾ ನಾಯಕ ಧಾರ್ಮಿಕ್ ಹಾಗೂ ಉಪನಾಯಕ ಶೌರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಶಾಲಾ ಕೌನ್ಸಿಲ್‌ ಲೀಡರ್ ಗಳು ದೀಪ ಬೆಳಗಿಸಿದರು. ಶಿಕ್ಷಕಿ ಚಿತ್ರ ಮತ್ತು ತಂಡ ಪ್ರಸ್ತುತಪಡಿಸಿದ ಸ್ವಾಗತ ನೃತ್ಯ ಮಕ್ಕಳಲ್ಲಿ ಹೊಸ ಚೈತನ್ಯವನ್ನು ತುಂಬಿದರೆ, ಶಿಕ್ಷಕಿ ಪೊನ್ನಮ್ಮ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದ ಮಾಹಿತಿ ಪ್ರೇರಣಾದಾಯಕವಾಗಿತ್ತು.

ದಾಮೋದರ್ ಗೌಡ ಹಾಗೂ ತಂಡದವರು ಪ್ರದರ್ಶಿಸಿದ ಹಾಸ್ಯನಾಟಕ ಪ್ರಮುಖ ಆಕರ್ಷಣೆಯಾಗಿ ಹಾಸ್ಯದ ಹೊನಲನ್ನೇ ಹರಿಸಿತ್ತು. ದಿವ್ಯ ಹಾಗೂ ತಂಡದ ನೃತ್ಯಪ್ರದರ್ಶನ ಮತ್ತು ಸಂಗೀತ ಶಿಕ್ಷಕಿ ಪ್ರತಿಭಾ ತಂಡದವರ ಗಾಯನ ಕಾರ್ಯಕ್ರಮವೂ ಮಕ್ಕಳನ್ನು ರಂಜಿಸಿದವು. ಶಾಲೆಯ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್. ಹಾಗೂ ನಾಗರಾಜ್ ಅವರು ಜನಪ್ರಿಯ ಚಲನಚಿತ್ರದ ಹಾಸ್ಯ ದೃಶ್ಯವನ್ನು ಪ್ರದಶಿ೯ಸಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.

 ಶಾಲಾ ಆಡಳಿತ ನಿರ್ವಹಣಾಧಿಕಾರಿ ರವಿ ಪಿ “ಬೊಂಬೆ ಹೇಳುತೈತೆ ಹಾಡು ಮಕ್ಕಳನ್ನು ಮಂತ್ರಮುಗ್ಧಗೊಳಿಸಿತ್ತು. ಶಿಕ್ಷಕರಾದ ಸುಮಂತ್ ,ವೀಣಾ ಎಂ.ಎಂ. ನಿರೂಪಿಸಿದರು. ಮಕ್ಕಳಿಗಾಗಿ ವಿವಿಧ ಕ್ರೀಡಾಕೂಟಗಳೂ ಆಯೋಜಿತವಾಗಿತ್ತು.