ಈದ್ ಮಿಲಾದ್ ಪ್ರಯುಕ್ತ ಎಮ್ಮೆಮಾಡು ಎಸ್.ವೈ.ಎಸ್ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಈದ್ ಮಿಲಾದ್ ಪ್ರಯುಕ್ತ ಎಮ್ಮೆಮಾಡು ಎಸ್.ವೈ.ಎಸ್ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ 1500ನೇ ಜನ್ಮ ದಿನಾಚರಣೆಯ ಅಂಗವಾಗಿ ಸೆ. 5 ರಂದು ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಮ್ಮೆಮಾಡು ಶಾಖೆಯ ಎಸ್.ವೈ.ಎಸ್, ಎಸ್.ಎಸ್.ಎಫ್, ಕೆಎಂಜೆ ಹಾಗೂ ಇಸಾಬ ಕಾರ್ಯಕರ್ತರಿಂದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.

ಎಮ್ಮೆಮಾಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಕಾಡುಗಳು ಬೆಳೆದು ರಸ್ತೆಗೆ ಆವರಿಸಿಕೊಂಡು ಸಾರ್ವಜನಿಕರ,ಶಾಲಾ ವಿದ್ಯಾರ್ಥಿಗಳ ಹಾಗೂ ವಾಹನ ಚಾಲಕರ ಸಂಚಾರಕ್ಕೆ ತೊಡಕುಂಟಾಗಿತ್ತು. ಇದನ್ನು ಮನಗಂಡ ಎಮ್ಮೆಮಾಡು ಎಸ್ ವೈಎಸ್, ಎಸ್ಎಸ್ಎಫ್,ಕೆಎಂಜೆ ಹಾಗೂ ಇಸಾಬ ತಂಡದ ಕಾರ್ಯಕರ್ತರು ರಸ್ತೆಯ ಎರಡು ಬದಿಗಳಲ್ಲಿ ಬೆಳೆದಿದ್ದ ಕಾಡುಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್ ವೈಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ಅಲ್ ಐದರೂಸಿ ತಂಙಳ್, ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ, ಎಸ್ ವೈ ಎಸ್ ರಾಜ್ಯ ನಾಯಕರಾದ ಅಶ್ರಫ್ ಬಿ.ಯು,ಎಸ್ ವೈ ಎಸ್ ಎಮ್ಮೆಮಾಡು ಯೂನಿಟ್ ಅಧ್ಯಕ್ಷ ನಝಿರ್ ಬಾಖವಿ, ಉಮ್ಮರ್ ಸಖಾಫಿ, ಕಾರ್ಯದರ್ಶಿ ಶೌಕತ್ ಮತ್ತಿತರರು ಪಾಲ್ಗೊಂಡಿದ್ದರು.