ಕಾವೇರಿ ಸಂಘದಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಸಿದ್ದಾಪುರ :ಕಾವೇರಿ ಸಂಘದ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ 45ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಚೆನ್ನಂಗಿ ಕಾವೇರಿ ಕ್ಲಬ್ ಆವರಣದಲ್ಲಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಲವು ಸ್ವರ್ದಾಳಿಗಳು ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಾಟೇರಿರಾ ಕರುಣ್ ಪ್ರಥಮ, ಕಲ್ಲಪ್ಪಂಡ ಶರಣು ದ್ವಿತೀಯ, ಕುಟ್ಟಂಡ ಮದನ್ ತೃತೀಯ ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ ಹಬ್ಬ ಆಚರಣೆಗಳ ಮೂಲಕ ಸಮಾಜ ಬಾಂಧವರು ಒಗ್ಗೂಡುವಿಕೆಯೊಂದಿಗೆ ಸಂಪ್ರದಾಯ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಸಾಧನೆ ತೋರುತ್ತಿದ್ದಾರೆ ಕಾವೇರಿ ಕ್ಲಬ್ ಹಲವು ವರ್ಷಗಳಿಂದಲೂ ವಿವಿಧ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿ ಮುನ್ನಡೆಯುತ್ತಿದೆ ಎಂದರು.
ಕಾವೇರಿ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಎ ಸಿ ಗಣಪತಿ ಮಾತನಾಡಿ ಕಳೆದ 45 ವರ್ಷಗಳಿಂದ ಕಾವೇರಿ ಸಂಘ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 50ಕ್ಕೊ ಹೆಚ್ಚು ಸ್ಪರ್ಧಾಳಿಗಳು ಭಾಗವಹಿಸಿ ಗುರಿಯೊಂದಿಗೆ ತಮ್ಮ ಸಾಧನೆ ತೋರಿದ್ದಾರೆ. ಸಮಾಜ ಬಾಂಧವರು ಸಂಘಟನೆಯೊಂದಿಗೆ ಸಂಪ್ರದಾಯ ಆಚರಣೆಗಳ ಮೂಲಕ ಪಾಲ್ಗೊಂಡು ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದರು ಕಾವೇರಿ ಸಂಘದ ಅಧ್ಯಕ್ಷ ತಕ್ಕಡೆ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕ್ಯಾಡೆಮಾಡ ಮಿಲನ್ ಸುಬ್ಬಯ್ಯ, ಸಂಘದ ಕಾರ್ಯದರ್ಶಿ ಮಲ್ಲಂಗಡ ಕಿಶೋರ್, ವಕೀಲ ಕೆ ಜಿ ಉತ್ತಪ್ಪ,ಗ ಗನ್ ಕಾರ್ಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .