ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ: ನಾಲ್ವರು ಸವಾರರಿಗೆ ಗಾಯ
ಸುಂಟಿಕೊಪ್ಪ: ಬೈಕು ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಸವಾರರು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ಸುಂಟಿಕೊಪ್ಪ ಕೆಇಬಿ ಸಮೀಪದ ಎಸ್.ಎಸ್ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ನಡೆದಿದೆ.
ಗದ್ದೆಹಳ್ಳ ಕಡೆಯಿಂದ ಬರುತ್ತಿದ್ದ ಯಶ್ವಂತ್ ಎಂಬುವವರ ಸ್ಕೂಟಿಗೆ ಸುಂಟಿಕೊಪ್ಪ ಪಟ್ಟಣ ಕಡೆಯಿಂದ ಗದ್ದೆಹಳ್ಳ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯಶ್ವಂತ್ ಅವರಿಗೆ ತೀವೃ ಸ್ವರೂಪದ ಗಾಯವಾಗಿದ್ದರೆ, ಮತ್ತೊಂದು ಬೈಕಕ್ ನಲ್ಲಿದ್ದ ಮೂವರ ಪೈಕಿ ಇಬ್ವರಿಗೆ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ದ್ವಿ ಚಕ್ರ ವಾಹನಗಳು ಜಖಂಗೊಂಡಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮಡಿಕೇರಿಗೆ ಸಾಗಿಸಲಾಗಿದೆ.
