ಬಂಟ ಸಮುದಾಯ ಬಗ್ಗೆ ನಿಂದನೆ ಆರೋಪ: ರತ್ನಾಕರ ಶೆಟ್ಟಿ ವಿರುದ್ದ ದೂರು

ಬಂಟ ಸಮುದಾಯ ಬಗ್ಗೆ ನಿಂದನೆ ಆರೋಪ: ರತ್ನಾಕರ ಶೆಟ್ಟಿ ವಿರುದ್ದ ದೂರು

ಮಡಿಕೇರಿ: ನಗದಲ್ಲಿರುವ ಬಂಟರ ಮೇಲೆ ನಿಂದನಾತ್ಮಕ ಪದ ಬಳಸಿ ತೇಜೋವಧೆ ಮಾಡಿದ ಹಿನ್ನಲೆಯಲ್ಲಿ ವಿರಾಜಪೇಟೆಯ ಬಿ.ರತ್ನಾಕರ್ ಶೆಟ್ಟಿ ವಿರುದ್ದ ಮಡಿಕೇರಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 29-10-2025 ರಂದು ಬಿ.ರತ್ನಾಕರ್ ಶೆಟ್ಟಿಯವರು ಚಾನೆಲ್ 3 ಎಂಬ ಜಾಲತಾಣ ಮಾಧ್ಯಮದಲ್ಲಿ ಮಡಿಕೇರಿ ನಗರದ ಬಂಟ ಸಮುದಾಯದವರು,ಅವಿವೇಕಿಗಳು, ಅಜ್ಞಾನಿಗಳು, ಅವಿದ್ಯಾವಂತರು ಹಾಗೂ ಬೆರಕೆಯವರು ಎಂದು ಅನೇಕ ನಿಂದನಾತ್ಮಕ ಪದ ಬಳಕೆ ಮಾಡಿ ಹೀಯಾಳಿಸುವ ಹೇಳಿಕೆಗಳನ್ನು ನೀಡಿದ್ದರು.ಇದು ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಡಿ ವ್ಯಾಪಕ ಟೀಕೆಗೆ ಒಳಗಾಗಿತ್ತು. ತಮ್ಮ ಜನಾಂಗದ ಸದಸ್ಯರು ಸಭ್ಯ ನಾಗರೀಕರಾಗಿದ್ದು ಅವರ ಘನತೆಗೆ ಕುಂದು ತರುವ ದುರುದ್ದೇಶದಿಂದ ಬಿ.ರತ್ನಾಕರ ಶೆಟ್ಟಿ ರವರು ಅಪಮಾನಿಸಿದ್ದಾರೆ ಎಂದು ಮಡಿಕೇರಿ ನಗರ ಬಂಟರ ಸಂಘದ ಅಧ್ಯಕ್ಷರಾದ ಪ್ರಭಾಕರ್ ( ಪ್ರಭುರೈ) ಸಲ್ಲಿಸಿದ ಪುಕಾರಿನ ಮೇರೆಗೆ ದೂರು ದಾಖಲಾಗಿದೆ.