ಬಿಜೆಪಿ ಮಾಜಿ ಶಾಸಕದ್ವಯರ ವಿರುದ್ಧ ವ್ಯಾಟ್ಸ್ ಗ್ರೂಪ್ ಗಳಲ್ಲಿ ಅಪಪ್ರಚಾರ ಆರೋಪ:ತೆನ್ನಿರ ಮೈನಾ ವಿರುದ್ಧ ದೂರು ದಾಖಲು
ವಿರಾಜಪೇಟೆ:ಇತ್ತೀಚಿನ ದಿನಗಳಲ್ಲಿ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಾಜಿ ಶಾಸಕ ರಂಜನ್ ಅಪ್ಪಚ್ಚು ಅವರನ್ನು ಕಾಂಗ್ರೆಸ್ ಪಕ್ಷದ ವಕ್ತಾರ ತೆನ್ನಿರ ಮೈನಾ ಎಂಬುವವರು ವ್ಯಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅವಹೇಳನಕಾರಿಯಾಗಿ ಬರೆದಿದ್ದಾರೆ. ಇದರಿಂದ ಕೊಡಗಿನ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ, ಅವರ ಮೇಲೆ ಕಾನೂನು ಕ್ರಮಕೈಗೊಳ್ಳ ಬೇಕೆಂದು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಬಿಜೆಪಿ ಎಸ್.ಸಿ. ಮೋರ್ಚಾದ ವಿರಾಜಪೇಟೆ ಮಂಡಲದ ಅಧ್ಯಕ್ಷರಾದ ಅಭಿಜಿತ್ ದೂರ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿರಾಜಪೇಟೆ ಮಂಡಲದ ಅದ್ಯಕ್ಷರಾದ ಸುವಿನ್ ಗಣಪತಿ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್,ವಿರಾಜಪೇಟೆ ನಗರದ ಮಾಜಿ ಅದ್ಯಕ್ಷರಾದ ಸಚಿ ಕುಟ್ಟಯ್ಯ, ಒ.ಬಿ.ಸಿ.ಮೋರ್ಚಾದ ಅಧ್ಯಕ್ಷರಾದ ಸುರೇಶ್, ಮುತ್ತಪ್ಪನ್ ಮಲೆಯಾಳಂ ಸಂಘದ ಅಧ್ಯಕ್ಷರಾದ ಸುಮೇಶ್,ಬಿಜೆಪಿ ಕಾರ್ಯಕರ್ತರಾದ ಸಾಯಿನಾಥ್ ನಾಯ್ಕ,ಮಹೇಶ್, ಉನ್ನಿ,ಸ್ನೇಕ್ ಸತೀಶ್, ಕಿರಣ್,ವಿಜಯ, ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
