ಪೊನ್ನಂಪೇಟೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗೊಂದಲ:ಫುಟ್ಬಾಲ್ ಫೈನಲ್ ಪಂದ್ಯದ ಅರ್ಧದಲ್ಲೇ ಮೈದಾನದಿಂದ ಹೊರನಡೆದ ಚೌಡೇಶ್ವರಿ ಅಮ್ಮತ್ತಿ ತಂಡ

ಪೊನ್ನಂಪೇಟೆ: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತೀರ್ಪುಗಾರಿಕೆಯ ಗೊಂದಲದಿಂದ ಚೌಡೇಶ್ವರಿ ಅಮ್ಮತ್ತಿ ತಂಡವು ಪಂದ್ಯದ ಅರ್ಧದಲ್ಲೇ ಹೊರನಡೆದ ಘಟನೆ ಮಂಗಳವಾರ ನಡೆದಿದೆ.ಫೈನಲ್ ಪಂದ್ಯವು ನೆಹರು ಎಫ್.ಸಿ ಪಾಲಿಬೆಟ್ಟ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ನಿಗದಿಯಾಗಿತ್ತು.ಪಂದ್ಯದ ಆರಂಭದಲ್ಲೇ ನೆಹರು ಎಫ್.ಸಿ ತಂಡವು ಅಜಯ್ ಅವರು ದಾಖಲಿಸಿದ ಗೋಲ್ ಆಫ್ ಸೈಡ್ ಎಂದು ಅಮ್ಮತ್ತಿ ಆಟಗಾರರು ಅಪೀಲ್ ಮಾಡಿದ್ದಾರೆ.ಸೈಡ್ ತೀರ್ಪುಗಾರರು ಮೊದಲು ಆಫ್ ಸೈಡ್ ಎಂದು ಪ್ಲೇಗ್ ರೈಸ್ ಮಾಡಿ ನಂತರ ಕೆಳಗೆ ಇಳಿಸಿದ್ದಾರೆ ಎಂದು ಚೌಡೇಶ್ವರಿ ಅಮ್ಮತ್ತಿ ತಂಡದ ಆಟಗಾರರು ಆರೋಪಿಸಿದ್ದಾರೆ. ಫುಟ್ಬಾಲ್ ನಿಯಮವನ್ನೇ ಬಾರದವರನ್ನು ತೀರ್ಪುಗಾರರನ್ನಾಗಿ ನೇಮಿಸಿ ಕಾಟಾಚಾರಕ್ಕೆ ದಸರಾ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವಿರುದ್ಧ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೀರ್ಪುಗಾರರ ಗೊಂದಲದಿಂದ ತೀರ್ಪಿನಿಂದಾಗಿ ಚೌಡೇಶ್ವರಿ ಅಮ್ಮತ್ತಿ ತಂಡದ ಫೈನಲ್ ಪಂದ್ಯದಿಂದ ಹೊರ ನಡೆದು ಆಕ್ರೋಶ ಹೊರಹಾಕಿದ್ದಾರೆ.