ಸಂಸ್ಕೃತಿ ಉಳಿವಿಗಾಗಿ ನಿರಂತರ ಪ್ರಯತ್ನ ಸಾಗಬೇಕು: ಗಣ್ಯರ ಅಭಿಮತ ಕಾಕೋಟುಪರಂಬು ಕೈಲ್ ಮುಹೂರ್ತ, ವಜ್ರ ಮಹೋತ್ಸವ ಸಮಾರೋಪ ಸಮಾರಂಭ
ವಿರಾಜಪೇಟೆ: ನಾಡು, ಧರ್ಮ, ಸಂಸ್ಕೃತಿ ಉಳಿವಿನಿಂದ ಮಾತ್ರ ಜನಾಂಗದ ಹೆಸರು ಅಜಾಮರವಾಗಿರುತ್ತದೆ ಎಂದು ಸಮಾರಂಭದ ಗಣ್ಯರ ಅಭಿಪ್ರಾಯ ವ್ಯಕ್ತಪಡಿಸಿದರು.ಕೈಲ್ ಮುಹೂರ್ತ ಸಂಘ ಕಾಕೋಟುಪರಂಬು 75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭದ ಸಮಾರೋಪ ಸಮಾರಂಭವು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಪರಿಪೂರ್ಣಗೊಂಡಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗಿಸಿ ಮಾತನಾಡಿದ ಕೊಡವ ಸಮಾಜ ಬೆಂಗಳೂರು ಅಧ್ಯಕ್ಷರಾದ ಚಿರಿಯಪಂಡ ಸುರೇಶ್ ಅವರು, ಕೊಡವ ಜನಾಂಗ ಕಿರಿದಾದರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ.ಕೃಷಿಯಲ್ಲಿ ಬದುಕು ಕಂಡು ಜೀವನ ಸಾಗಿಸುತ್ತಿದ್ದ ಹಲವರು ಇಂದು ಕಷ್ಟ ಎಂದು ಭಾವಿಸಿ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಸ್ವಉದ್ಯೋಗ ರೂಪಿಸಿಕೊಂಡ ಸ್ವಾವಲಂಬಿ ಜೀವನ ಸಾಗಿಸುವತ್ತ ಜನಾಂಗ ಮುಂದಾಗಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಕರ್ನಾಟಕ ಸರ್ಕಾರ, ತೀತಿರ ರೋಶನ್ ಅಪ್ಪಚ್ಚು ಅವರು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್, ಲಾಯರ್ ಆಗಬೇಕು ಎನ್ನುವುದು ಹಲವರ ಕನಸಾಗಿದೆ. ಆದರೆ ಕ್ರೀಡಾಪಟುವಾಗಬೇಕು ಎಂದು ಕನಸುಕಾಣಿ. ಕ್ರೀಡಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡುತ್ತದೆ. ಸಾಧನೆಗೆ ಗುರಿ ಮತ್ತು ಅಚಲವಾದ ಛಲ ಮುಖ್ಯ. ಗ್ರಾಮೀಣ ಕಲೆ ಸಾಹಿತ್ಯ ಸಂಸ್ಕೃತಿ ಎಂದಿಗೂ ಮಾಸದೇ ಉಳಿವಿಗಾಗಿ ಪ್ರಯತ್ನ ಸಾಗಬೇಕು ಎಂದು ಹೇಳಿದರು.
ನೆಕ್ಟರ್ ಫ್ರೇಶ್ ಮತ್ತು ವೀರವ್ರತಂ ಫೌಂಡೇಶನ್ ನ ಸಂಸ್ಥಾಪಕರು, ವ್ಯವಸ್ಥಾಪಕ ನಿದೇರ್ಶಕರಾದ ಕುಪ್ಪಂಡ ಛಾಯ ನಂಜಪ್ಪ ರಾಜಪ್ಪ ಅವರು ಮಾತನಾಡಿ ಗ್ರಾಮಗಳಲ್ಲಿ ಒಗ್ಗಟ್ಟು ನೆಲೆನಿಲ್ಲಬೆಕಾದರೇ ರಾಜಕೀಯವನ್ನು ಬದಿಗೊತ್ತಿ, ದೇಶದ ಯಾವುದೇ ಭಾಗ ಹಾಗೂ ವಿದೇಶದಲ್ಲಿ ನೆಲೆಕಂಡರು ನಾಡಿನ, ಜನಾಂಗದ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಮರೆತು ಜೀವಿಸಬೇಡಿ. ಧರ್ಮವನ್ನು ನಾವು ಕಾಪಡಿದಲ್ಲಿ ಧರ್ಮ ನಮ್ಮನ್ನು ಕಾಪಡುತ್ತದೆ ಎಂದು ಮನಗಾಣಬೇಕು. ಕೊಡಗಿನ ಕೃಷಿಕ ಸಮುದಾಯವು ಭತ್ತ, ಕಾಫಿ, ಕರಿಮೆಣಸು ಬೆಳೆಗಳನ್ನು ನಂಬಿಕೊಂಡು ಜೀವನ ಮಾಡದೇ ಪರ್ಯಾಯ ಬೆಳೆಗಳ ಬಗ್ಗೆ ಗಮನಹರಿಸಿದ ಜೀವನ ಮಟ್ಟ ಸುಧಾರಿಸಿಕೊಳ್ಳಿ ಎಂದು ಹೇಳಿದರು.
ಕೈಲ್ ಮುಹೂರ್ತ ಸಂಘ ಕಾಕೋಟುಪರಂಬು ವಜ್ರ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಮಂಡೇಟಿರ ಎಂ.ಸುರೇಶ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಜನಾಂಗಕ್ಕೆ ವಿರಳವಾದ ಹಬ್ಬಗಳು ಆಚರಣೆಯಲ್ಲಿದ್ದರು ನಮ್ಮ ಪೂರ್ವಜರು ಎಲ್ಲಾ ಹಬ್ಬಗಳಿಗೆ ವಿಶೇಷ ಅರ್ಥ ಕಲ್ಪಿಸಿದ್ದಾರೆ. ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಸಮಾರಂಭವು ವಿಶೇಷತೆಗಳಿಂದ ಆಚರಣೆಯಾಗುವ ನಿಟ್ಟಿನಲ್ಲಿ ಕಾಕೋಟುಪರಂಬು, ನಾಲ್ಕೇರಿ, ಕುಂಜಿಲಗೇರಿ, ಮೈತಾಡಿ ಬೆಳ್ಳುಮಾಡು, ಅರಮೇರಿ ಗ್ರಾಮಗಳ ವಾಸಿಗಳಿಗಾಗಿ ಮೂರು ದಿನಗಳಕಾಲ ವಿವಿದ ಆಟೋಟ ಸ್ಪರ್ಧೇಗಳನ್ನು ಅಯೋಜಿಸಿ ಯಶಸ್ಸು ಕಂಡಿದೆ, ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಸದಸ್ಯರು, ದಾನಿಗಳಿಗೆ ಧನ್ಯವಾದ ಆರ್ಪಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಕಬ್ಬಚೀರ ರಶ್ಮೀ ಕಾರ್ಯಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೊಡವ ಸಮಾಜ ಬೆಂಗಳೂರು ಅದ್ಯಕ್ಷರಾದ ಚಿರಿಯಪಂಡ ಸುರೇಶ್,ಚೀಫ್ ಎಲೆಕ್ಟ್ರೀಕಲ್ ಇನ್ಸ್ಪೆಕ್ಟರ್ ಕರ್ನಾಟಕ ಸರ್ಕಾರ ತೀತಿರ ರೋಶನ್ ಅಪ್ಪಚ್ಚು, ನೆಕ್ಟರ್ ಫ್ರೇಶ್ ಮತ್ತು ವೀರವ್ರತಂ ಫೌಂಡೇಶನ್ ನ ಸಂಸ್ಥಾಪಕರು, ವ್ಯವಸ್ಥಾಪಕ ನಿದೇರ್ಶಕರಾದ ಕುಪ್ಪಂಡ ಛಾಯ ನಂಜಪ್ಪ ರಾಜಪ್ಪ ಸೇರಿದಂತೆ ಸಂಘದಲ್ಲಿ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಿಗೆ ವಜ್ರಮಹೋತ್ಸ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮೂರು ದಿನಗಳ ಕಾಲ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೇ, ಹಗ್ಗಜಗ್ಗಾಟ ಸ್ಪರ್ಧೇ, ಸ್ಲೋ ಬೈಕ್ ರೇಸ್ ( ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೆಕ) ಸ್ಪರ್ಧೇಗಳು, ಥ್ರೋಬಾಲ್ (ಮಹಿಳೆಯರಿಗೆ) ಪ್ರಾಥಮಿಕ ಶಾಲಾ, ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ಬಾಲಕ, ಬಾಲಕಿಯರಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ತಂಡಗಳಿಗೆ ಪರಿತೋಷಕ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಗ್ಗಜಗ್ಗಾಟ ಮಹಿಳೆಯರ ವಿಭಾಗದಲ್ಲಿ ಮೈತಾಡಿ ಗ್ರಾಮ ವಿಜೇತವಾಯಿತು. ಪುರುಷರ ವಿಭಾಗದಲ್ಲಿ ಟೀಮ್ ನಾಲ್ಕೇರಿ ತಂಡವು ವಿಜಯವಾಯಿತು.
ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಅಚರಣಾ ಸಮಿತಿಯ ಗೌ.ಕಾರ್ಯದರ್ಶಿ ಅಪ್ಪಚಂಗಡ ಪ್ರಕಾಶ್ ಪೂಣಚ್ಚ ಅವರು ಸವರ‍್ನು ಸ್ವಾಗತಿಸಿ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿ ಕಲ್ಪನಾ ವಂದಿಸಿದರು.
ಕೈಲ್ ಮುಹೂರ್ತ ಸಂಘ ಕಾಕೋಟುಪರಂಬು ವಜ್ರ ಮಹೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಕಾಕೋಟುಪರಂಬು, ನಾಲ್ಕೇರಿ, ಕುಂಜಿಲಗೇರಿ, ಮೈತಾಡಿ ಬೆಳ್ಳುಮಾಡು, ಅರಮೇರಿ ಗ್ರಾಮಗಳ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ
