ಕತ್ತಲೆಕಾಡು : ನಾಳೆ ಸಂಕ್ರಾಂತಿ ದೀಪೋತ್ಸವ, ಭಜನೆ ಕಾರ್ಯಕ್ರಮ

ಕತ್ತಲೆಕಾಡು : ನಾಳೆ ಸಂಕ್ರಾಂತಿ ದೀಪೋತ್ಸವ, ಭಜನೆ ಕಾರ್ಯಕ್ರಮ
ವಿನಾಯಕ ಸೇವಾ ಟ್ರಸ್ಟ್ ಲೋಗೋ

ಕಡಗದಾಳು : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ಜ.15ರಂದು ಸಂಜೆ ಆಯೋಜಿಸಲಾಗಿದೆ. ಟ್ರಸ್ಟ್‌ ಆವರಣದಲ್ಲಿ ಸಂಜೆ 06 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, 6.30ಕ್ಕೆ ದೀಪೋತ್ಸವ, ರಾತ್ರಿ 7 ಗಂಟೆಗೆ ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಸದಸ್ಯರಿಂದ ಭಜನೆ, ರಾತ್ರಿ 8ಕ್ಕೆ ಮಂಗಳಾರತಿ, 8-15ಕ್ಕೆ ಫಲಹಾರ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಟ್ರಸ್ಟ್‌ಗೆ ನೂತನವಾಗಿ ಖರೀದಿಸಲಾದ ಧ್ವನಿವರ್ಧಕವನ್ನು ಲೋಕಾರ್ಪಣೆ ಮಾಡಲಾಗುವುದು. ಕೊನೆಯಲ್ಲಿ ಸುಭಾಷ್‌ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.