ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ಸಾವು

ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ಸಾವು

ಕುಶಾಲನಗರ: ಕೊಡಗು ಅರಣ್ಯ ವೃತ್ತ ಮಡಿಕೇರಿ ವಿಭಾಗ ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ವಾಲ್ನೂರು ಹಾಗೂ ಮಾಲ್ದಾರೆ ನದಿ ಮಧ್ಯದಲ್ಲಿ ದಿನಾಂಕ: 17-09-2025ರಂದು ಮಧ್ಯಾಹ್ನ 2.00 ಗಂಟೆಗೆ ಕಾಡಾನೆ ಮೃತದೇಹವು ಕಂಡುಬಂದಿದೆ. ಸ

ದರಿ ಮೃತಪಟ್ಟ ಆನೆಯನ್ನು ನದಿಯ ಮಧ್ಯಭಾಗದಿಂದ ತರಲು ಇಲಾಖಾ ಆನೆ ಹಾಗೂ ಬೋಟು ಅವಶ್ಯಕತೆ ಇದ್ದ ಕಾರಣ ದಿನಾಂಕ: 18-09-2025ರಂದು ಬೆಳಗ್ಗೆ ಬೋಟಿನ ವ್ಯವಸ್ಥೆ ಮಾಡಿಕೊಂಡು ಬೋಟು ಹಾಗೂ ಸಾಕಾನೆಯ ಸಹಾಯದಿಂದ ನದಿಯಿಂದ ಹೊರ ತರಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ ಎ.ಎ, ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್, ಡಾ. ಮುಜೀಬ್ ಮುಖ್ಯ ವಶುವೈಧ್ಯಾಧಿಕಾರಿಗಳು ಹಾಗೂ ಡಾ. ಚಿಟ್ಟಿಯಪ್ಪ ಪಶುವೈದ್ಯಾಧಿಕಾರಿ ಸಮ್ಮುಖದಲ್ಲಿ ಮೃತಪಟ್ಟ ಆನೆಯನ್ನು ನದಿ ಮಧ್ಯದಿಂದ ತೆಗೆದು ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸದರಿ ಮೃತಪಟ್ಟ ಆನೆಯು ಹೆಣ್ಣು ಕಾಡಾನೆಯಾಗಿದ್ದು ಆನೆಗೆ ಯಾವುದೇ ಗುಂಡು ತಗುಲಿ ಅಥವಾ ವಿದ್ಯುತ್ ಸ್ಪರ್ಷದಿಂದ ಮೃತಪಡದೆ ನದಿ ನೀರಿನಲ್ಲಿ ಮುಳುಗಿ  ಸತ್ತಿರುವ ಬಗ್ಗೆ  ಪಶು ವೈಧ್ಯಾಧಿಕಾರಿಗಳು ದೃಢಪಡಿಸಿರುವುದಾಗಿ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರು ಇಲಾಖೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.‌