ಕಾರುಗುಂದ ವಿದ್ಯಾಥಿ೯ಗಳಿಗೆ ಸವಿ ಕಾಫಿ ವಿತರಣೆ : ಕಾಫಿ ಮಹತ್ವ ತಿಳಿಸಿದ ಮಹಿಳೆಯರು

ಕಾರುಗುಂದ ವಿದ್ಯಾಥಿ೯ಗಳಿಗೆ ಸವಿ ಕಾಫಿ ವಿತರಣೆ : ಕಾಫಿ ಮಹತ್ವ ತಿಳಿಸಿದ ಮಹಿಳೆಯರು

ಮಡಿಕೇರಿ:ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನಲೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘದಿಂದ ಕಾರುಗುಂದದಲ್ಲಿ ವಿದ್ಯಾಥಿ೯ಗಳಿಗೆ ಸವಿಕಾಫಿಯನ್ನು ನೀಡಲಾಯಿತು ಕೊಡಗು ಕಾಫಿ ಜಾಗ್ರತಿ ಸಂಘದಿಂದ ಶಾಲೆಗಳಲ್ಲಿ ಮಕ್ಕಳಿಗೆ ಕಾಫಿ ಪಾನೀಯದ ಜಾಗ್ರತಿ ಮೂಡಿಸುವ ಕಾಯ೯ಕ್ರಮದ ಅಂಗವಾಗಿ ಕಾರುಗುಂದ ಸಕಾ೯ರಿ ಶಾಲಾ ವಿದ್ಯಾಥಿ೯ಗಳಿಗೆ ಸವಿಯಾದ ಕಾಫಿ ನೀಡಲಾಯಿತು.

ಆರೋಗ್ಯದ ಮೇಲೆ ಕಾಫಿಯಿಂದ ಉಂಟಾಗುವ ಉತ್ತಮ ಪರಿಣಾಮಗಳನ್ನು ವಿವರಿಸಲಾಯಿತು. ಕಾಫಿಯಿಂದಾಗಿ ಪ್ರತಿ ನಿತ್ಯ ಮನುಷ್ಯನಿಗೆ ಹೆಚ್ಚು ಲವಲವಿಕೆ ಬರುತ್ತದೆ ಎಂದೂ ತಿಳಿಸಲಾಯಿತು. ಕೊಡಗಿನಲ್ಲಿ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಈ ನಿಟ್ಟಿನಲ್ಲಿ ಕೖಷಿಕರು ಮತ್ತು ಕಾಮಿ೯ಕರ ಶ್ರಮವನ್ನೂ ಶಾಲಾ ವಿದ್ಯಾಥಿ೯ಗಳಿಗೆ ತಿಳಿಸಲಾಯಿತು. ಸಂಸ್ಥೆಯ ಪ್ರಮುಖರಾದ ಕುಟ್ಟೇಟಿರ ಕುಮಾರಿ ಕುಂಜ್ಞಪ್ಪ, ನಾಟೋಳಂಡ ಗಿರಿಜಾ ಚಮ೯ಣ್ಣ, ಕುಟ್ಟೇಟಿರ ಗೌರಮ್ಮ ಕಾವೇರಪ್ಪ, ಜರೀನ್ ಉತ್ತಪ್ಪ, ಮೊಟ್ಟೆಯಂಡ ಲೀನಾ ಕುಟ್ಟಪ್ಪ, ಪಟ್ಟಮಾಡ ಲೇಖಾ ಪೊನ್ನಪ್ಪ, ಕಬ್ಬಚ್ಚಿರ ಸಬಿತ ಉತ್ತಯ್ಯ, ಶಾಲಾ ಮುಖ್ಯಶಿಕ್ಷಕಿ ಪವೀ೯ನ್ ಹಾಜರಿದ್ದು ಕಾಫಿ ಮಾಹಿತಿ ನೀಡಿದರು.