ಅಕ್ಟೋಬರ್ 18ರಂದು ಧನ್ವಂತರಿ‌ ಜಯಂತಿ

ಅಕ್ಟೋಬರ್ 18ರಂದು  ಧನ್ವಂತರಿ‌ ಜಯಂತಿ

ಮಡಿಕೇರಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕೊಡಗು(ನೀಮಾ) ವತಿಯಿಂದ ಧನ್ವಂತರಿ ಜಯಂತಿಯನ್ನು ನಗರದ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಅ.೧೮ ರಂದು ಹಮ್ಮಿಕೊಳ್ಳಲಾಗಿದೆ ಎಂದು ನೀಮಾ ಕೊಡಗು ಅಧ್ಯಕ್ಷ ಡಾ.ಎ.ಆರ್.ರಾಜಾರಾಮ್ ತಿಳಿಸಿದ್ದಾರೆ.

ನೀಮಾ ತನ್ನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಮೂಲಕ ಧನ್ವಂತರಿ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಸ್ಪರ್ಧೆ, ಶಿಬಿರ ಮತ್ತು ೨,೫೦೦ ಹಸಿರು ಗಿಡಗಳ ನೆಡುವಿಕೆ ಕಾರ್ಯಕ್ರಮ ಮಾಡಲಾಗಿದೆ. ಇದರ ಭಾಗವಾಗಿ ಅ.೧೮ ರಂದು ಧನ್ವಂತರಿ ಜಯಂತಿ ಮತ್ತು ನೀಮಾ ಕೊಡಗುಗೆ ೨೫ ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ನೈಸರ್ಗಿಕ ಚಕಿತ್ಸೆಗಾಗಿ ಜನರ ಆರೋಗ್ಯಕ್ಕಾಗಿ ಕೆಲಸ ಮಾಡಿದ ೨೫ ಸಾಧಕರನ್ನು ಸನ್ಮಾನಿಸಲಾಗುವುದು.

ಸಾರ್ವಜನಿಕರು ಮಾಹಿತಿ ಇದ್ದಲ್ಲಿ ನೀಮಾ ಕೊಡಗಿಗೆ ಸೂಚಿಸಬಹುದು ಎಂದರು. ಡಾ.ಅನುಷಾ ಮಾತನಾಡಿ, ಕಾರ್ಯಕ್ರಮದ ಪ್ರಯುಕ್ತ ವೈದ್ಯರಿಗೆ ಲೇಖನ ಸ್ಪರ್ಧೆ ಏರ್ಪಡಿಸಲಾಗಿದ್ದು, ಸೆ.೨೫ರೊಳಗೆ ಕಚೇರಿಗೆ ತಲುಪಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ೯೮೮೬೨೬೬೧೨೦ ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಜ್ಯೋತಿ ರಾಜಾರಾಮ್ ಉಪಸ್ಥಿತರಿದ್ದರು.