ಗದ್ದೆಗೆ ತೆರಳುವ ದಾರಿ ವಿಷಯದಲ್ಲಿ ಗಲಾಟೆ: ಚಿಕ್ಕಮ್ಮನ ಮೇಲೆ ಗುದ್ದಲಿಯಿಂದ ಹಲ್ಲೆ

ಪೊನ್ನಂಪೇಟೆ:ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದಲ್ಲಿ ನಡೆದಿದೆ.ಮಹಿಳೆಯ ಪತಿಯ ಅಣ್ಣನ ಪುತ್ರನಿಂದ ಕೃತ್ಯ ನಡೆದಿದ್ದು ಅರಮಣಮಾಡ ಬಾಗು (56) ಎಂಬುವರ ಮೇಲೆ ಹಲ್ಲೆ,ಅರಮಣಮಾಡ ಸಚಿನ್ (42) ಹಲ್ಲೆ ಮಾಡಿದದ್ದಾನೆ. ಚಿಕ್ಕಮ್ಮ ಬಾಗುವಿನ ಎದೆ ಮೇಲೆ ಕುಳಿತು ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಗದ್ದೆಗೆ ತೆರಳುವ ದಾರಿ ವಿಚಾರದಲ್ಲಿ ಗಲಾಟೆ ಸಂಭವಿಸಿದ್ದು, ಘಟನೆ ಬಳಿಕ ಆರೋಪಿ ಸಚಿನ್ ಪರಾರಿಯಾಗಿದ್ದಾನೆ. ಗಾಯಾಳು ಮಹಿಳೆ ಬೆಂಗಳೂರು ಸೇನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಯೋಧನ ತಾಯಿ ಆಗಿರೋ ಗಾಯಾಳು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.