ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ: ಹುಂಡಿ ಮರ್ಕಝ್ ಪಬ್ಲಿಕ್ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ: ಹುಂಡಿ ಮರ್ಕಝ್ ಪಬ್ಲಿಕ್ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆ

ಮಡಿಕೇರಿ: ಶನಿವಾರಸಂತೆಯ ಭಾರತೀ ವಿದ್ಯಾ ಸಂಸ್ಥೆಯಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ತಾಲ್ಲೂಕು ತಂಡವನ್ನು ಪ್ರತಿನಿಧಿಸಿದ ಹುಂಡಿ ಮರ್ಕಝ್ ಪಬ್ಲಿಕ್ ಶಾಲಾ ತಂಡವು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಸೆಮಿಫೈನಲ್ ಪಂದ್ಯದಲ್ಲಿ ಮಡಿಕೇರಿ ತಾಲ್ಲೂಕು ತಂಡವನ್ನು 3-0 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿ,ಫೈನಲ್ ನಲ್ಲಿ ಸೋಮವಾರಪೇಟೆ ತಂಡವನ್ನು ಸಿನಾನ್ ಬಾರಿಸಿದ 1 ಗೋಲುಗಳಿಂದ ಮಣಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹುಂಡಿ ತಂಡಕ್ಕೆ ದೈಹಿಕ ಶಿಕ್ಷಕ ನಾಸಿರ್ ಹಾಗೂ ರದೀಶ್ ತರಬೇತಿ ನೀಡಿದರು.