ರಾಜಾಸೀಟ್‌ನಲ್ಲಿ 'ಗ್ಲಾಸ್ ಬ್ರಿಡ್ಜ್' ಬಗ್ಗೆ ಸಂಸದ ಯದುವೀರ್ ಒಡೆಯರ್ ಏನಂದ್ರೂ ಗೊತ್ತೇ?

ರಾಜಾಸೀಟ್‌ನಲ್ಲಿ 'ಗ್ಲಾಸ್ ಬ್ರಿಡ್ಜ್' ಬಗ್ಗೆ ಸಂಸದ ಯದುವೀರ್ ಒಡೆಯರ್ ಏನಂದ್ರೂ ಗೊತ್ತೇ?

ಮಡಿಕೆೇರಿ : ಸುಂದರ ಪರಿಸರ ತಾಣ ಮಡಿಕೇರಿಯ ರಾಜಾಸೀಟ್‌ನಲ್ಲಿ 'ಗ್ಲಾಸ್ ಬ್ರಿಡ್ಜ್' ನಿರ್ಮಿಸುವ ಪ್ರಯತ್ನಗಳಿಗೆ ತನ್ನ ಸಂಪೂರ್ಣ ವಿರೋಧವಿದೆ. ಈ ನಿಟ್ಟಿನ ಹೋರಾಟಗಳಿಗೂ ತನ್ನ ಬೆಂಬಲವಿದೆಯೆಂದು ಸ್ಪಷ್ಟಪಡಿಸಿದರು. ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೊಂತಿ ಗಣೇಶ್ ವಿಚಾರ ಪ್ರಸ್ತಾಪಿಸಿ, ಬೆಟ್ಟ ಪ್ರದೇಶಗಳಲ್ಲಿ ಗ್ಲಾಸ್ ಬ್ರ‍್ರಿಡ್ಜ್ನಂತಹ ನಿರ್ಮಾಣಗಳಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. ಈಗಾಗಲೆ ಬಿಜೆಪಿ ಪಕ್ಷ ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರ‍್ರಿಡ್ಜ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಪರಿಸರದ ತಾಣವನ್ನುಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಲುವುದು ಅತ್ಯವಶ್ಯ, ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ತಮ್ಮ ವಿರೋಧವಿರವುದಾಗಿ ತಿಳಿಸಿದರು.