ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕಗಳನ್ನು ಲೋಕಾರ್ಪಣೆ ‌ಮಾಡಿದ ಡಾ ಮಂತರ್ ಗೌಡ

ಜಿಲ್ಲಾ ಆಸ್ಪತ್ರೆಯಲ್ಲಿ  ವಿಶೇಷ ಚಿಕಿತ್ಸಾ ಘಟಕಗಳನ್ನು ಲೋಕಾರ್ಪಣೆ ‌ಮಾಡಿದ ಡಾ ಮಂತರ್ ಗೌಡ

ಮಡಿಕೇರಿ:ಕೊಡಗು ವೈದ್ಯಕೀಯ ವಿಜ್ಞಾನ ಬೋಧಕ ಸಂಸ್ಥೆ ಆಸ್ಪತ್ರೆ ಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವಿವಿಧ ಚಿಕಿತ್ಸಾ ಘಟಕಗಳನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಶನಿವಾರ ಲೋಕಾರ್ಪಣೆ ‌ಮಾಡಿದರು.

ಉನ್ನತ ತಂತ್ರಜ್ಞಾನದ ಉಪಕರಣಗಳ ಅಳವಡಿಕೆಯೊಂದಿಗೆ ಹೈಟೆಕ್ ಚಿಕಿತ್ಸೆ ಗೆ ಸಿದ್ದವಾಗಿರುವ ಆ್ಯಂಟಿ ರೇಬಿಸ್ ಘಟಕ,ದಂತಚಿಕಿತ್ಸಾ ಘಟಕ,ಡಯಾಲಿಸಿಸ್ ಘಟಕ ಮತ್ತು ಒಪಿಜಿ ತಪಾಸಣಾ ಘಟಕಗಳನ್ನು ಡಾ ಮಂತರ್ ಗೌಡ ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದರು. ಕೊಡಗು ಮೆಡಿಕಲ್ ಕಾಲೇಜು ಆಸ್ಪತ್ರೆ ಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಿ ಕೊಡಗಿನ ಜನರ ಬಹುಕಾಲದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಈಡೇರಿಸಲು ತಾವು ಬದ್ಧರಿದ್ದು ಈ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಅನುದಾನ ತರಲು ತಾವು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಡಾ ಮಂತರ್ ಗೌಡ ತಿಳಿಸಿದ್ದಾರೆ.ಬಹುತೇಕ ಎಲ್ಲಾ ರೀತಿಯ ಉನ್ನತ ಚಿಕಿತ್ಸೆಗಳು ಕೊಡಗು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಲಭ್ಯವಿದ್ದು ನಾಗರೀಕರು ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಆಸ್ಪತ್ರೆಯ ವೈದ್ಯರು,ಸಿಬ್ಬಂದಿಗಳು ಸೇವೆಯನ್ನು ಕರ್ತವ್ಯ ಎಂದು ಪರಿಗಣಿಸಿ ರೋಗಿಗಳನ್ನು ಗಮನಿಸಬೇಕು ಎಂದು ಕಿವಿ ಮಾತು ಹೇಳಿದರು.

 ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ ಲೋಕೇಶ್ ಕುಮಾರ್,ಜಿಲ್ಲಾ ಸರ್ಜನ್ ಡಾ ನಂಜುಂಡಯ್ಯ, ಎಂ.ಎಸ್. ಡಾ ಸೋಮಶೇಖರ್, ಇಲಾಖಾ ಮುಖ್ಯಸ್ಥರಾದ ಡಾ ಕಾಮತ್ , ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಸಿ.ಜಗದೀಶ್, ಮುದ್ದುರಾಜ್,ಕಲೀಲ್ ಬಾಷಾ,ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಪ್ರಮುಖರು ಉಪಸ್ಥಿತರಿದ್ದರು.