ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ: "ದೈವಜ್ಞ ಬ್ರಾಹ್ಮಣ ಎಂದು ಜಾತಿ ಕಾಲಂನಲ್ಲಿ ದಾಖಲಿಸಲು ಮನವಿ

ಮಡಿಕೇರಿ: ಶ್ರೀ ಜ್ಞಾನೇಶ್ವರಿ ಗುರುಪೀಠ, ದೈವಜ್ಞ ಬ್ರಾಹ್ಮಣ ಮಠ ಶ್ರೀ ಕ್ಷೇತ್ರ ಕರ್ಕಿ (ಹೊನ್ನಾವರ ತಾಲೋಕು)ದ ಗುರುಗಳಾದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ರವಿ ಗಾಂವ್ಕರ್ ರವರ ನಿರ್ದೇಶನದಂತೆ ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆ ೨೦೨೫ರಲ್ಲಿ ಸೆಪ್ಟಂಬರ್ ೨೨ ರಿಂದ ನಡೆಯುವ ರಾಜ್ಯ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು “ದೈವಜ್ಞ ಬ್ರಾಹ್ಮಣ” ಎಂದೇ ಜಾತಿ ಕಲಂನಲ್ಲಿ ನಮೂದಿಸಬೇಕೆಂದು ಹಾಗೂ ಉಪಜಾತಿ ಕಾಲಂನಲ್ಲಿಯೂ ದೈವಜ್ಞ ಬ್ರಾಹ್ಮಣ ಎಂದೇ ನಮೂದಿಸಬೇಕೆಂದು ಮಡಿಕೇರಿಯ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ವಲಯಾಧ್ಯಕ್ಷರಾದ ಸತೀಶ್ ಶೇಟ್ ರವರು ತಿಳಿಸಿದರು.
ಮಡಿಕೇರಿಯಲ್ಲಿ ನಡೆದ ಜಾತಿಗಣತಿ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಮೀಕ್ಷಯಲ್ಲಿ ಸಮೂದಾಯವು ಹಿಂದುಳಿದ ಪ್ರವರ್ಗಗಳ ಔಃಅ II (ಂ) ಕಲಂನಲ್ಲಿ ಬರುವುದರಿಂದ ತಮ್ಮ ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರು. ನಿಖರವಾದ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು ಈ ಮಾಹಿತಿಯನ್ನು ಪ್ರತಿ ಗ್ರಾಮ ತಾಲೂಕು ಮಟ್ಟದಲ್ಲಿ ತಮ್ಮ ಕ್ಷೇತ್ರದ ಸಮಾಜದ ಮುಖಂಡರು ಸ್ವಯಂ ಪ್ರೇರಿತರಾಗಿ ತಿಳಿಸಬೇಕು ಹಾಗೂ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಬೇಕೆಂದು ತಿಳಿಸಿದರು.
ಇದರಿಂದ ನಮ್ಮ ಸಾಮಾಜದ ಜನ ಸಂಖ್ಯೆಯ ನಿಖರವಾದ ಮಾಹಿತಿ ತಿಳಿಯುತ್ತದೆ ಹಾಗೂ ಮುಂದಿನ ದಿನಗಳಲ್ಲಿ ತುಂಬಾ ಅಗತ್ಯವಾಗಿರುತ್ತದೆ ಎಂದು ಹೇಳಿದರು. ಸಭೆಯಲ್ಲಿ ದೈವಜ್ಞ ಬ್ರಾಹ್ಮಣ ಸಂಘದ ಮಡಿಕೇರಿಯ ಅಧ್ಯಕ್ಷರ ಬಿ.ವಿ. ರೋಷನ್, ಬಿ.ಹೆಚ್. ಉಲ್ಲಾಸ್, ಎಸ್.ಎ. ವಿನಾಯಕ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.