ನಾಡಿನ ಪ್ರತಿಯೊಬ್ಬರೂ ಅರಣ್ಯ ಸಂಪತ್ತನ್ನು ರಕ್ಷಿಸಲು ಪಣತೊಡಬೇಕು:ಶಾಸಕ ಎ.ಎಸ್ ಪೊನ್ನಣ್ಣ

ವಿರಾಜಪೇಟೆ:ತಾಲೂಕಿನ ಕುಂಜಿಲಗೇರಿಯಲ್ಲಿ, ಕರ್ನಾಟಕ ಅರಣ್ಯ ಇಲಾಖೆಯ ವಿರಾಜಪೇಟೆ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭಾಗವಹಿಸಿ ಮಾತನಾಡಿದರು.
ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು, ನಾಡಿನ ಪ್ರತಿಯೊಬ್ಬರೂ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಮುಖ್ಯ ಭೂಮಿಕೆ ವಹಿಸಬೇಕು. ಆಗಾದರೆ ಮಾತ್ರ ಇಂದಿನ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕವಾದಂತಾಗುತ್ತದೆ. ಸಾಧ್ಯವಾದಷ್ಟು ಸಸಿಗಳನ್ನು ನೆಡುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮವಾದ ವಾತಾವರಣ ನಿರ್ಮಿಸಲು ನಾವೆಲ್ಲರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು. ವನಮಹೋತ್ಸವವು ಕೇವಲ ಆಚರಣೆ ಮಾತ್ರ ಆಗದೆ, ಇದನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಮುಂದಿನ ಪೀಳಿಗೆಯು ಒಳ್ಳೆಯ ಗಾಳಿಯನ್ನು ಉಸಿರಾಡಲು ಸಹಕಾರಿಯಾಗುತ್ತದೆ. ಅರಣ್ಯ ಸಂಪತ್ತು ಇಲ್ಲದಿದ್ದರೆ ಮಾನವನ ಜೀವನ ಶೂನ್ಯ ಆಗುವುದರಲ್ಲಿ ಸಂಶಯವಿಲ್ಲ ಎಂದು ಬಣ್ಣಿಸಿದ್ದರು. ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸುವತ್ತ ಗಮನಹರಿಸಿ ತಮ್ಮ ಕೈಲಿಯಲ್ಲಿ ಸಾಧ್ಯವಾದಷ್ಟು ಸಸಿಗಳನ್ನು ನೆಡುವ ಮೂಲಕ ಈ ಒಂದು ಉತ್ತಮ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕುಂಜಲಗೇರಿ ದೇವಸ್ಥಾನದ ಯೂನಿಯನ್ ಅಧ್ಯಕ್ಷರಾದ ಬಟ್ಟಕಾಲಂಡ ರಾಜ ದಿನೇಶ್, ಅರಣ್ಯ ಅಧಿಕಾರಿಗಳು, ದಯಾ ರೈ, ಬೋವ್ವೆರಿಯಂಡ ಅಜಿತ್, ಸಾಮ್ರಾಟ್, ಚೋಟ್ಟೇರ ರಮೇಶ್, ಮದನ್ ಚಿನ್ನಪ್ಪ, ಜಗನ್, ಲೋಕೇಶ್ ಮಾದಯ್ಯ, ಮಂಜೀರ ಕುಟ್ಟಪ್ಪ, ಚೋಟ್ಟೇರ ರಮೇಶ್, ಬಾಲ್ಯಟಾ0ಡ ಕೌಶಿಕ್, ಬಟ್ಟಕಲಂಡ ನೂತನ್, ಸಾಬು ಬೆಳಿಯಪ್ಪ, ಲೋಹಿತ್, ಶುಭ ಚರ್ ಮಂಡ ಕಾಪ್ಸ್ ವಿದ್ಯಾ ಸಂಸ್ಥೆ ಯ ವಿದ್ಯಾರ್ಥಿ ಲಕ್ಷ್ಯ ಪೊನ್ನಮ್ಮ , ಹಾಗೂ ಕಾವೇರಿ ಶಾಲೆ ವಿರಾಜಪೇಟೆಯ ಧನ್ವಿ ದೇಚಮ್ಮ ,ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.