ಮಡಿಕೇರಿಯಲ್ಲಿ ನಕಲಿ ಪೊಲೀಸ್:ಪ್ರಕರಣ ದಾಖಲು
ಮಡಿಕೇರಿ:ಆಂಧ್ರ ಪ್ರದೇಶದ ಇನೋವಾ ಕಾರಿನಲ್ಲಿ ಪೊಲೀಸ್ ಎಂದು ನಾಮಫಲಕ ಅಳವಡಿಸಿ ತಿರುಗಾಡುತ್ತಿದ್ದ ಕಾರನ್ನು ಮಡಿಕೇರಿಯ ಟ್ರಾಫಿಕ್ ಪೊಲೀಸರು ತಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಬೆಳಿಗ್ಗೆ ಮೈಸೂರು ಕಡೆಯಿಂದ ಬಂದ ಟೊಯೋಟಾ ಇನೋವಾ ಕಾರು AP 02 CH 5859 ಕಾರಿನ ಮುಂಬಾಗ ಪೊಲೀಸ್ ಎಂಬ ನಾಮಫಲಕ ಅಳವಡಿಸಿದ್ದನ್ನು ಗಮನಿಸಿದ ಆಟೋ ಚಾಲಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಮಡಿಕೇರಿಯ ಟೌನ್ ಹಾಲ್ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಕಲಿ ಪೊಲೀಸರ ಸೋಗಿನಲ್ಲಿ ನಗರಕ್ಕೆ ಎಂಟ್ರಿ ಕೊಟ್ಟಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
