ಗುತ್ತಿಗಾದರರ ಸಂಘದಿಂದ ಧನ ಸಹಾಯ

ವಿರಾಜಪೇಟೆ: ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಬೆಂಗಳೂರು, ಕೇಂದ್ರ ಸಮಿತಿ ವತಿಯಿಂದ ವಿರಾಜಪೇಟೆಯ ಸದಸ್ಯರಾದ ಎಂ.ಡಿ. ರಫೀಕ್ ಅವರಿಗೆ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ 10, 000 ರೂ ಮೊತ್ತದ ಚೆಕ್ ವಿತರಿಸಲಾಯಿತು.
ಜಿಲ್ಲಾ ಸಮಿತಿಯ ಮೂಲಕ ಚೆಕ್ಕನ್ನು ನೀಡಲಾಗಿದ್ದು, ತಾಲೂಕು ಸಮಿತಿ ವತಿಯಿಂದ ವಿರಾಜಪಟ್ಟೆಯ ಸಮಿತಿಯ ಕಚೇರಿಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ಎಂ. ಗಣೇಶ್ ಹಾಗೂ ತಾಲೂಕು ಸಮಿತಿ ಅಧ್ಯಕ್ಷರಾದ ಬಿ.ಸಿ. ಭರತ್ ಅವರ ಮೂಲಕ ಎಂ. ಡಿ ರಫೀಕ್ ಅವರಿಗೆ ಚೆಕ್ಕನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ರಮೇಶ್ ಬಿ. ಎನ್. ಹಾಗೂ ಸದಸ್ಯರಾದ ಮನು, ಬಿ. ಸಿ. ಕಿರಣ್, ಇಮ್ರಾನ್ ಉಪಸ್ಥಿತರಿದ್ದರು.