ಟಿಬೆಟಿಯನ್ ಕ್ಯಾಂಪ್ ವ್ಯಾಪ್ತಿಯಲ್ಲಿ ಬ್ರೌನ್ ಶುಗರ್ MDMA ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಯುವಕರ ಬಂಧನ

ಬೈಲಕುಪ್ಪೆ : ಟಿಬೆಟಿಯನ್ ಕ್ಯಾಂಪ್ ವ್ಯಾಪ್ತಿಯಲ್ಲಿ ಬ್ರೌನ್ ಶುಗರ್ MDMA ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ಅಖಿಲೇಶ್ (22) ಸಮೋಸ ವ್ಯಾಪಾರ ಮಾಡುವ ಯುವಕ, ಕೊಡಗಿನ ಮೂಲದ ಕಿಶನ್ (22) ಬೈಲಕುಪ್ಪೆ ಶಾಂಗ್ರಿಲಾ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ, ಮತ್ತೊಬ್ಬ ಕೊಡಗಿನ ಮೂಲದ ಪ್ರಥಮ ಎಂ ಸಿ ಎ ವಿದ್ಯಾರ್ಥಿ ಉಲ್ಲಾಸ್ (22) ಕುಶಾಲನಗರದ ಮತ್ತೊಬ್ಬ ವಿದ್ಯಾರ್ಥಿ ಚೇರಿಷ್ (24) ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನಿಂದ 8 ಗ್ರಾಂ ಬ್ರೌನ್ ಶುಗರ್ ತೆಗೆದುಕೊಂಡು ಬಂದು ಟಿಬೆಟಿಯನ್ನರಿಗೆ ಮಾರಾಟ ಮಾಡುವ ಸಮಯದಲ್ಲಿ ಮಾಲು ಸಮೇತ ಸಿಕ್ಕಿಬಿದ್ದಿದ್ದು, ಆರೋಪಿಗಳ ಮೇಲೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂದಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬ್ರೌನ್ ಶುಗರನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಕಾರ್ಯಚರಣೆಯಲ್ಲಿ ಬೈಲಕುಪ್ಪೆ ಕ್ರೈಂ ಸಬ್ ಇನ್ಸ್ಪೆಕ್ಟರ್ ಎಚ್ ಎಸ್ ರವಿ, ಸಿಬ್ಬಂದಿಗಳಾದ ಸುರೇಶ್, ಮುದ್ದುರಾಜು, ತ್ರಿಣೇಶ್, ವಿಜಯ್ ಪವಾರ್ ಭಾಗಿಯಾಗಿದ್ದರು.