ಬೆಕ್ಕೆಸೊಡ್ಲೂರು ಗ್ರಾಮಸ್ಥರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಯಾತ್ರೆ

ಪೊನ್ನಂಪೇಟೆ :- ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಆರೋಪಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲು ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮಸ್ಥರು, ಗ್ರಾಮದ ಶ್ರೀ ಮಂದತ್ತವ್ವ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡರು. ಮುಂಜಾನೆ ಮಂದತ್ತವ್ವ ದೇವಸ್ಥಾನದ ದ್ವಾರದಲ್ಲಿ ತಾವು ಪ್ರಯಾಣಿಸುವ ವಾಹನಕ್ಕೆ ಪೂಜೆ ಸಲ್ಲಿಸಿ ಧರ್ಮಯಾತ್ರೆಯನ್ನು ಕೈಗೊಂಡರು.
ಈ ಸಂದರ್ಭ ಶ್ರೀ ಮಂದತವ್ವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಾಚೀಮಾಡ ರವೀಂದ್ರ ಅವರು ಮಾತನಾಡಿ, ಬೆಕ್ಕೆಸೊಡ್ಲೂರು ಗ್ರಾಮಸ್ಥರು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ ಎದುರಿಸುತ್ತಿರುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡಲು ಹಾಗೂ ಹಿಂದೂ ಧರ್ಮದ ಉಳಿವಿಗಾಗಿ ಗ್ರಾಮಸ್ಥರೆಲ್ಲ ಒಟ್ಟಾಗಿ ಧರ್ಮಯಾತ್ರೆ ಕೈಗೊಂಡಿದ್ದೇವೆ. ಧರ್ಮಸ್ಥಳ ಸತ್ಯ, ನ್ಯಾಯ, ನೀತಿಗೆ ಹೆಸರುವಾಸಿಯಾಗಿರುವಂತೆ ಕೊಡಗಿನ ಶ್ರೀ ಮಂದತ್ತವ್ವ ದೇವಸ್ಥಾನ ನ್ಯಾಯ, ನೀತಿ, ಧರ್ಮಕ್ಕೆ ಹೆಸರುವಾಸಿಯಾಗಿರುವುದರಿಂದ ಇಲ್ಲಿನ ಗ್ರಾಮಸ್ಥರೆಲ್ಲ ಸೇರಿ ಈ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಧರ್ಮಯಾತ್ರೆ ಆರಂಭಿಸಿದ್ದೇವೆ ಎಂದರು.
ಈ ಸಂದರ್ಭ ಮಲ್ಲಮಾಡ ಪ್ರಕಾಶ್, ಈಶ್ವರ, ವಿಷ್ಣು, ಕಿರು, ಗುಲ್ಸನ್, ಮಲ್ಲಮಾಡ ಸುಕು, ಮಾಚಿಮಾಡ ರವೀಂದ್ರ, ಚರಣ್, ಚಂದ್ರ, ಸಂಪತ್, ಧನು, ಕಿರಣ್, ಸುಮನ್, ಹರೀಶ್,ಮಚ್ಚಮಾಡ ವಿನು, ಮೋನೆ, ರಾಜ, ಸಂಪತ್, ನಂದ, ತಾಣಚೀರ ಸಚ್ಚು, ನಿರನ್, ದೀಪಕ್, ಮಾಚಂಗಡ ನಿಖಿಲ್, ನಿರನ್, ವಿನೇಶ್, ಇಂದ್ರ, ಜೀವನ್, ನವಿ, ಬಾಡಮಾಡ ಅಪ್ಪಿ, ತೀತಮಾಡ ಜಯ, ಮುತ್ತಪ್ಪ, ಶಶಿ, ವಾಸು, ಮಂಜು, ಸಂಜು, ರಾಜ, ರಸಿಕ, ಪೋರಂಗಡ ನಂದ, ಪೊನ್ನು, ಕಿಸು, ಸುಳ್ಳಿಮಾಡ ಮಂದು, ಶಾಹಿ, ಗಯ, ಗುಡ್ಡಿಯಂಗಡ ಗಿರೀಶ್, ಮುಳ್ಳೆಂಗಡ ಚಂಗಪ್ಪ, ಚಿನ್ನಸ್ವಾಮಿ, ಗಣೇಶ ಹಾಗೂ ಶಮಿ, ಶ್ರೀ ಮಂದತ್ತವ್ವ ದೇವಸ್ಥಾನ ಭಂಡಾರ ಸಮಿತಿಯ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು ಹಾಗೂ ಬೆಕ್ಕೆಸೊಡ್ಲೂರು ಗ್ರಾಮಸ್ಥರು ಧರ್ಮಯಾತ್ರೆಯಲ್ಲಿ ಪಾಲ್ಗೊಂಡರು.
ವರದಿ: ಚಂಪಾ ಗಗನ ಪೊನ್ನಂಪೇಟೆ