ಹೊರ ಜಿಲ್ಲೆಯವರಿಂದ ಕೊಡಗಿನಲ್ಲಿ ಗಾಂಜಾ ಮಾರಾಟ: ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಹೆಚ್.ಡಿ ಕೋಟೆ ತಾಲ್ಲೂಕಿನ ವ್ಯಕ್ತಿ ಅರೆಸ್ಟ್:4ಕೆಜಿ 710 ಗ್ರಾಂ ಗಾಂಜಾ ವಶಕ್ಕೆ

ಹೊರ ಜಿಲ್ಲೆಯವರಿಂದ ಕೊಡಗಿನಲ್ಲಿ ಗಾಂಜಾ ಮಾರಾಟ:  ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಹೆಚ್.ಡಿ ಕೋಟೆ ತಾಲ್ಲೂಕಿನ ವ್ಯಕ್ತಿ ಅರೆಸ್ಟ್:4ಕೆಜಿ 710 ಗ್ರಾಂ ಗಾಂಜಾ ವಶಕ್ಕೆ

ವಿರಾಜಪೇಟೆ:ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ / ಸರಬರಾಜು ಮಾಡುತ್ತಿದ್ದ ಆರೋಪಿಯೊರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಚ್.ಡಿ. ಕೋಟೆ ತಾಲ್ಲೂಕು ಅಂತರಸಂತೆ ದೊಡ್ಡ ಭೈರನ ಕುಟ್ಟೆ ಗ್ರಾಮದ ನಿವಾಸಿ ಜಿ. ಆಕ್ರಂ (48) ಎಂಬಾತ ಮಾಲು ಸಮೇತ ಸೆರೆಸಿಕ್ಕಿರುವ ಆರೋಪಿ ಆಗಿದ್ದಾನೆ.

ಈತ ದಿನಾಂಕ 10-08-2025 ರಂದು ಬಿಟ್ಟಂಗಾಲ ಗ್ರಾಮದ ಪೆಗ್ಗರೆಕಾಡು ಪೈಸಾರಿ ಜಂಕ್ಷನ್ ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ / ಸರಬರಾಜು ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ವಿರಾಜಪೇಟೆ ಉಪ ವಿಭಾಗ DSP ಮಹೇಶ್ ಕುಮಾರ್, ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ PSI ಲತಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 4 ಕೆ.ಜಿ. 710 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.