ಕೊಡಗಿನ ಗೋಜೋಕಾಯ್ ಕರಾಟೆ ತರಬೇತಿ ಶಾಲೆಗೆ ಕರಾಟೆಯಲ್ಲಿ ಚಾಂಪಿಯನ್ ಪಟ್ಟ

ಕೊಡಗಿನ ಗೋಜೋಕಾಯ್ ಕರಾಟೆ ತರಬೇತಿ ಶಾಲೆಗೆ ಕರಾಟೆಯಲ್ಲಿ  ಚಾಂಪಿಯನ್ ಪಟ್ಟ

ವಿರಾಜಪೇಟೆ: ಡಿ09: ಕರಾಟೆ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಗೋಜೊಕಾಯ್ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ವಿ.ಎಸ್.ಕೆ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾಟಗಳು ಮೈಸೂರಿನ ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಮುಕ್ತ ಕರಾಟೆ ಪಂದ್ಯಾಟಗಳಲ್ಲಿ ಕೊಡಗು ಜಿಲ್ಲೆಯ ಗೋಜೊಕಾಯ್ ಕರಾಟೆ ತರಬೇತಿ ಶಾಲೆಯ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿದ್ದರು.

 ಕತ್ತಾ ಮತ್ತು ಕುಮಿತೆ ವಿಭಾಗದಲ್ಲಿ 32 ಪ್ರಥಮ, 28 ದ್ವೀತಿಯ ಹಾಗೂ 24 ತೃತೀಯ ಸ್ಥಾನಗಳನ್ನು ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿರುವುದನ್ನು ಮನಗಂಡ ಆಯೋಜಕರು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ 68 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು. ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ಶಾಲೆಯ ಶಿಕ್ಷಕರಾದ ಸೆನ್‌ಸಾಯಿ ಎಂ.ಬಿ ಚಂದ್ರನ್ ಅವರು ತರಬೇತಿ ನೀಡಿದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ