ಗೋಣಿಕೊಪ್ಪ:ಕಬಡ್ಡಿ ಕ್ರೀಡಾಕೂಟ ನಡೆಸುತ್ತೇವೆ ಎಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ವಂಚಿಸಿದ ವ್ಯಕ್ತಿಯ ವಿರುದ್ಧ ದೂರು ದಾಖಲು
ಗೋಣಿಕೊಪ್ಪ: ಕಬ್ಬಡಿ ಕ್ರೀಡಾಕೂಟ ನಡೆಸುತ್ತೆವೆ ಎಂದು ಸಾರ್ವಜನಿಕರಿಂದ ಇಂಚರ ಸಂಸ್ಥೆ ಹೆಸರಿಲ್ಲಿ ಹಣ ವಸೂಲಿ ಮಾಡಿ ವಂಚಿಸಿರುವ ಬಗ್ಗೆ ನಾಗೇಶ್ ಡಿ ಎಂಬಾತನ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಬ್ಬಡಿ ಪಂದ್ಯಾಟಕ್ಕೆ ನಡೆಸಲು ಮುಂದಾದ 10 ತಂಡದ ಮಾಲೀಕರುಗಳು ಡಿ ನಾಗೇಶ್ ವಿರುದ್ಧ ವಂಚನೆ ಆರೋಪದಲ್ಲಿ ದೂರು ನೀಡಿದಾರೆ. ಇಂಚರ ಸಂಸ್ಥೆಯ ಮಾಲೀಕ , ಮತ್ತು ಪತ್ರಕರ್ತ ಎಂದು ಹೇಳಿಕೊಳ್ಳುತ್ತಾ , ನಾಗೇಶ್ ಡಿ ಎಂಬಾತ ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿಸೆಂಬರ್ 6 ಮತ್ತು 7ರಂದು ಕಬ್ಬಡಿ ಪಂದ್ಯಾಟ ನಡೆಸುವುದಾಗಿ ನವೆಂಬರ್ 22ರಂದು ಸದರನ್ ಟ್ರೇಟ್ ಹಾಲ್ ನಲ್ಲಿ ಬಿಡ್ಡಿಂಗ್ ನಡೆಸಿ 10 ತಂಡದ ಮಾಲೀಕರ ಮೂಲಕ ಆಟಗಾರರ ಖರೀದಿ ನಡೆದಿತ್ತು.
ಕಬ್ಬಡಿ ಪಂದ್ಯಾಟ ನಡೆಯುವ ಭರವಸೆಯಲ್ಲಿ ತಂಡದ ಮಾಲೀಕರುಗಳು ತಮ್ಮ ತಂಡದ ಆಟಗಾರರಿಗೆ ಜರ್ಸಿ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ, ತಲಾ ಒಂದು ತಂಡವು ಸುಮಾರು 30 ಸಾವಿರ ರೂಪಾಯಿಗಳು ವೆಚ್ಚ ಮಾಡಲಾಗಿದೆ. ಆದರೆ, ಕಬ್ಬಡಿ ನಡೆಸುತ್ತೇನೆ ಎಂದು ಜವಾಬ್ದಾರಿ ಹೊತ್ತುಕೊಂಡ ನಾಗೇಶ್ ಡಿ ಎಂಬಾತ ಡಿಸೆಂಬರ್ 6 ಮತ್ತು 7ರಂದು ಮಳೆಯ ಕಾರಣ ನೀಡಿ ಪಂದ್ಯಾಟ ಮುಂದೂಡಿದರು.
ನಂತರ ಡಿ. 13.ಮತ್ತು 14ರಂದು ನಡೆಸುವುದಾಗಿ ತಿಳಿಸಿದರು. ಆದರೆ, ಪಂದ್ಯಾಟ ನಡೆಸಲು ಬೇಕಾದ ಮ್ಯಾಟ್ ಅಳವಡಿಕೆ, ಶಾಮಿಯಾನ ,ಮೈದಾನದ ದುರಸ್ತಿ ಕಾರ್ಯ ಸೇರಿದಂತೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿರ್ವಹಣೆಯನ್ನು ನಿರ್ಲಕ್ಷ ಮಾಡಿ ಆಟ ಆಡಿಸುತ್ತೇವೆ ಎಂದು ಹೇಳುತ್ತಲೇ ತಂಡದ ಮಾಲೀಕರು ಹಾಗೂ ಆಟಗಾರರನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
10 ತಂಡದ ಮಾಲೀಕರುಗಳಾದ ಟೀಮ್ ಶಿವಾಜಿ, ಎಂ.ಟಿ.ಎಫ್.ಸಿ. ಟೀಮ್ ಆದಿತ್ಯ, ಟೀಮ್ ಮಂತರ್ ಗೌಡ, ಬ್ಲಾಕ್ ಪ್ಯಾಂಥರ್ಸ್, ಟೀಮ್ ಡಿ.ಪಿ.ಎ. ಟೀಮ್ ಬಾಳೆಲೆ, ಎಸ್. ಫ್ರೆಂಡ್ಸ್, ಟೀಮ್ ಕಾವೇರಿ ತಂಡದ ಮಾಲೀಕರು ಹಾಗೂ ಆಟಗಾರರು ವಿಚಾರಿಸಿದಾಗ ಈ ಬಗ್ಗೆ ನಿರ್ಲಕ್ಷ್ಯ ದೋರಣೆ ತೋರುತ್ತಾ, ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ, ಈ ನಡೆಯಿಂದಾಗಿ ಗೋಣಿಕೊಪ್ಪದಲ್ಲಿ ಮುಂದೆ ನಡೆಯುವ ಇತರ ಕ್ರೀಡಾಕೂಟಗಳಿಗೂ ಹೊಡೆತ ಬೀಳಲಿದೆ ಮತ್ತು ಗೋಣಿಕೊಪ್ಪಕ್ಕೆ ದೊಡ್ಡ ಕಳಂಕ ಅಂಟಿಕೊಳ್ಳಲಿದೆ. ಜಿಲ್ಲೆಯ ಅಥವಾ ರಾಜ್ಯದಿಂದ ಯಾವುದೇ ಆಟಗಾರರು ಗೋಣಿಕೊಪ್ಪದಲ್ಲಿ ಭಾಗವಹಿಸಲು ಬರುವುದಿಲ್ಲ ಎಂಬ ಆತಂಕ ಎದುರಾಗಿದೆ ಎಂದು ತಂಡದ ಮಾಲಿಕರುಗಳಾದ, ಅಣ್ಣಪ್ಪ, ಅನೀಲ್, ವಿನೋದ್, ಶ್ರೀಜು, ವಿನು, ಪುನಿತ್, ಶ್ರೀನಿವಾಸ್, ಸೇರಿದಂತೆ ಹಲವಾರು ಆರೋಪಿಸಿದ್ದಾರೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಿಂದಲೂ ಕಬ್ಬಡಿ ಪಂದ್ಯಾಟಕ್ಕೆ ಎಂದು 15 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಜತೆಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೂ ತಾಲೂಕು ಪಂಚಾಯಿತಿ ಮೂಲಕ ಕ್ರೀಡಾಕೂಟಕ್ಕೆ ಧನ ಸಹಾಯ ಒದಗಿಸಿಕೊಡುವಂತೆ ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈತನ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕೆಂದು ಮನವಿ ಮಾಡಿಕೊಂಡ ತಂಡದ ಮಾಲೀಕರುಗಳು, ಪಂದ್ಯಾಟದ ಟ್ರೋಪಿಗಾಗಿ, ಶಾಮಿಯಾನಗಳಿಗಾಗಿ 700 ಮತದಿಂದ 70ಸಾವಿರ ವರೆಗಿನ ಚೆಕ್ಕುಗಳನ್ನು ನೀಡಲಾಗಿದ್ದು, ಅವೆಲ್ಲವೂ ಸಹ ಚೆಕ್ ಬೌನ್ಸ್ ಆಗಿದೆ ಎಂದು ತಂಡದ ಮಾಲೀಕರುಗಳು ಮಾಹಿತಿ ನೀಡಿದ್ದಾರೆ.
ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ , ಪ್ರತಿ ತಂಡಗಳಿಗೂ ಖರ್ಚು ಮಾಡಿರುವ 15 ಸಾವಿರ ರೂಪಾಯಿಗಳ ಒಂದು ವಾರದೊಳಗೆ ನೀಡುವುದಾಗಿ ಪೊಲೀಸರ ಸಮ್ಮುಖದಲ್ಲಿ ನಾಗೇಶ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
