ಗೋಣಿಕೊಪ್ಪ; ಹರಿಶ್ಚಂದ್ರಪುರದ ಕೀಲೇರಿ ಮುತ್ತಪ್ಪ ದೇವಾಲಯದಲ್ಲಿ ಪುತ್ತರಿ ಆಚರಣೆ
ಗೋಣಿಕೊಪ್ಪ;ಇಲ್ಲಿನ ಹರಿಶ್ಚಂದ್ರಪುರದ ಕೀಲೇರಿ ಮುತ್ತಪ್ಪ ದೇವಾಲಯದಲ್ಲಿ ಡಿ.4 ಪುತ್ತರಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಮುತ್ತಪ್ಪ ದೇವರ ಆಶಿರ್ವಾದ ಪಡೆದ ಮುತ್ತಪ್ಪ ದೇವರ ಕೃಪೆಗೆ ಪಾತ್ರರಾದರು.
ನಂತರ 9.40ಕ್ಕೆ ಕದಿರು ಕೊಯ್ದು ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ, ಧಾನ್ಯಲಕ್ಷ್ಮೀ ಯನ್ನು ಭಕ್ತಾದಿಗಳು ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು, ನಂತರ ನೆರೆದಿದ್ದ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು.ಪುತ್ತರಿ ವೆಳ್ಳಾಟಂ ಪ್ರಯುಕ್ತ ಭಕ್ತಾದಿಗಳಿಗೆ ಸಂಪ್ರದಾಯ ತಂಬಿಟ್ಟು , ಹಾಗೂ ಪುತ್ತರಿ ಗೆಣಸಿನ ಬಜ್ಜಿ, ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.
ಮುತ್ತಪ್ಪ ವೆಳ್ಳಾಟಂ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಹರಿಶ್ಚಂದ್ರಪುರ ಕೀಲೇರಿ ಮಠಪುರ ಟ್ರಸ್ಟ್ ಟ್ರಸ್ಟಿಗಳಾದ , ಕೆ.ಜೆ ಜಯೇಂದ್ರನ್, ಕೆ.ವೈ.ಸಮಜಿತ್ , ಕೆ.ವೈ ರಜಿತ್, ಮೋಹನ್ ರಾಜ್, ರೀತೀರಿ ಕುಟುಂಬದ ಸದಸ್ಯರು ಹಾಗೂ ಎಂ . ಎಸ್ ಸುಬ್ರಮಣಿ , ವಿ.ಅರ್ ಸಫ್ತೇಶ್,ಟಿ.ಎಂ ಪ್ರಜೀತ್, ಕೆ.ಡಿ. ರಾಜೇಂದ್ರನ್ ರವರು ಈ ಸಂದರ್ಭದಲ್ಲಿ ಹಾಜರಿದ್ದರು.
