ಗೃಹಲಕ್ಷ್ಮಿ ಯೋಜನೆ; ಐಟಿ, ಜಿಎಸ್‍ಟಿ ಟ್ಯಾಕ್ಸ್ ಪೇಯಿ ಅವರ ಗಮನಕ್ಕೆ?

ಗೃಹಲಕ್ಷ್ಮಿ ಯೋಜನೆ; ಐಟಿ, ಜಿಎಸ್‍ಟಿ ಟ್ಯಾಕ್ಸ್ ಪೇಯಿ ಅವರ ಗಮನಕ್ಕೆ?

ಮಡಿಕೇರಿ:-ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ “ಗೃಹಲಕ್ಷ್ಮಿ” ಯೋಜಯು ಒಂದಾಗಿದ್ದು, ದಿನಾಂಕ:-06-06-2023ರ ಆದೇಶ ಹಾಗೂ ದಿನಾಂಕ:-17-07-2023ರ ಮಾರ್ಗಸೂಚಿ ಯಂತೆ ಅನುಷ್ಠಾನಗೊಳಿಸಲಾಗುತ್ತಿದೆ. ದಿನಾಂಕ:-17-07-2023 ರಂದು ಹೊರಡಿಸಿದ ಮಾರ್ಗಸೂಚಿ ಅನ್ವಯ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ. ರಿಟನ್ರ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ. ಈವರೆಗೆ ರಾಜ್ಯಾದ್ಯಾಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್‍ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದು ಬಂದಿರುತ್ತದೆ.

 ದಿನಾಂಕ: 15-07-2025ರ ಎಂಪಿಐಸಿ ಸಭೆಯಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳು ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಗೆ ಒಳಪಡುವುದರಿಂದ ಅರ್ಜಿ ಪರಿಗಣಿಸಲು ಬರುವುದಿಲ್ಲ. ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯಡಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳ ಧನಸಹಾಯ ಪಾವತಿಗಾಗಿ ಮನವಿ ಸಲ್ಲಿಸಿದಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿಗಳಾಗಿರುವುದರಿಂದ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ ಇವರ ಹಂತದಲ್ಲಿ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.