ಬಸ್ ತಂಗುದಾಣ ಕಾಮಗಾರಿಗೆ ಗುದ್ದಲಿ ಪೂಜೆ

ಕೊಡ್ಲಿಪೇಟೆ:ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮ ಪಂಚಾಯಿತಿ ವತಿಯಿಂದ ಬೆಸೂರು ಗ್ರಾಮದ ಹಳೆಯ ಶಿತಿಲಗೊಂಡಿದ್ದ ಬಸ್ ನಿಲ್ದಾಣ ಕಟ್ಟಡವನ್ನು ಕೆಡವಿ ಹೊಸ ಸಾರ್ವಜನಿಕ ಬಸ್ ನಿಲ್ದಾಣದ ಗುದ್ದಲಿ ಪೂಜೆಯನ್ನು ಪಂಚಾಯಿತಿ ವತಿಯಿಂದ ನೆರವೇರಿಸಲಾಯಿತು. ಬೆಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಮಲಮ್ಮ ಉಪಾಧ್ಯಕ್ಷ ಹರೀಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಗುತ್ತಿಗೆದಾರ ಸುರೇಶ್ ಸದಸ್ಯರುಗಳಾದ ಜಯರಾಜ ಕಿಶಾನ್ ಕುಮಾರ್, ರವಿ, ದಯಾ,ಕೀರ್ತಿ, ಶಾಲಿನಿ, ರಾಧಾ,ಗೌರಮ್ಮ,ರಾಮ ಮುಂತಾದವರು ಇದ್ದರು.